×
Ad

ಉದ್ಯಾವರ: ಆ.29ಕ್ಕೆ ಮಂಜುನಾಥ ಉದ್ಯಾವರ ಸಂಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ

Update: 2021-08-24 21:37 IST

ಉದ್ಯಾವರ, ಆ.24: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಗ್ರಾಮದ ಅಭಿವೃದ್ಧಿಯ ಹರಿಕಾರ ಮಂಜುನಾಥ ಉದ್ಯಾವರ್ ಅವರ 9ನೇ ಸಂಸ್ಮರಣೆಯ ಅಂಗವಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆ.29ರ ರವಿವಾರ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 9:00ರಿಂದ ಅಪರಾಹ್ನ 1:00ರವರೆಗೆ ನಡೆಯಲಿದೆ.

ರಕ್ತದಾನ ಶಿಬಿರದ ಉದ್ಘಾಟನೆ ಹಾಗೂ ವೈದ್ಯಕೀಯ ನೆರವು ವಿತರಣೆಯು ಬೆಳಗ್ಗೆ 9:15ಕ್ಕೆ ನಡೆಯಲಿದ್ದು, ಇದರಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ,ಉದ್ಯಾವರ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಉಪಾಧ್ಯಕ್ಷ ಮಧುಲತಾ ಶಶಿಧರ್, ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ಭಾಗವಹಿಸಲಿರುವರು.

ಬೆಳಗ್ಗೆ 9:00ಕ್ಕೆ ಮಠದಂಗಡಿ ಪಾಂದೆ ರಸ್ತೆಗೆ ಉದ್ಯಾವರ ಗ್ರಾಪಂ ನಿರ್ಣಯಿ ಸಿದಂತೆ ಮಂಜುನಾಥ ಉದ್ಯಾವರ ಮಾರ್ಗ ಎಂದು ನಾಮಕರಣ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಶೇಖರ್ ಕೆ.ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News