ಕೋವಿಡ್ ಸೋಂಕಿತ ಸಿಇಟಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ
ಉಡುಪಿ, ಆ.25: ಆಗಸ್ಟ್ 28 ಮತ್ತು 29ರಂದು ಜಿಲ್ಲೆಯ ಒಟ್ಟು 10 ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗಳು ನಡೆಯಲಿವೆ. ಇವುಗಳಲ್ಲಿ ಉಡುಪಿಯಲ್ಲಿ 5, ಕುಂದಾಪುರದಲ್ಲಿ 3 ಮತ್ತು ಕಾರ್ಕಳದಲ್ಲಿ 2 ಕೇಂದ್ರಗಳು ಸೇರಿವೆ. ಉಡುಪಿ, ಆ.25: ಆಗಸ್ಟ್ 28 ಮತ್ತು 29ರಂದು ಜಿಲ್ಲೆಯ ಒಟ್ಟು 10 ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗಳು ನಡೆಯಲಿವೆ. ಇವುಗಳಲ್ಲಿ ಉಡುಪಿಯಲ್ಲಿ 5, ಕುಂದಾಪುರದಲ್ಲಿ 3 ಮತ್ತು ಕಾರ್ಕಳದಲ್ಲಿ 2 ಕೇಂದ್ರಗಳು ಸೇರಿವೆ. ಇದರಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಅಜ್ಜರಕಾಡಿನ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಪ್ರತ್ಯೇಕ ಪರೀಕ್ಷಾ ಕೇಂದ್ರವನ್ನು ತೆರೆದಿದ್ದು, ಕೋವಿಡ್ ಬಾಧಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಗೂ ಪರೀಕ್ಷಾ ಕೇಂದ್ರಕ್ಕೆ ಬರಲು ಸೂಕ್ತ ವಾಹನ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ದೂ.ಸಂ:9845953978 (ಗಿರೀಶ್ ಕುಲಕರ್ಣಿ) ಹಾಗೂ 9448416987 (ಮಂಜುನಾಥ ಭಟ್) ಇವರ ಬಳಿ ಮುಂಚಿತವಾಗಿ ನೀಡು ವಂತೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.