×
Ad

ವಿತರಣೆಯಾಗದೆ ಆಹಾರ ಕಿಟ್‌ಗಳ ಪದಾರ್ಥ ಹಾಳು: ಶುಭದ ರಾವ್ ಆರೋಪ

Update: 2021-08-25 20:39 IST

ಕಾರ್ಕಳ, ಆ.25: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಊರಿನಲ್ಲಿ ಆಹಾರ ಕಿಟ್‌ಗಳು ವಿತರಣೆಯಾಗದೆ ಪದಾರ್ಥ ಗಳು ಕೆಟ್ಟುಹೋಗುತ್ತಿವೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಹಾಗೂ ಕಾರ್ಕಳ ಪುರಸಭೆ ಸದ ಸ್ಯ ಶುಭದ ರಾವ್ ಆರೋಪಿಸಿದ್ದಾರೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಾಯವಾಗ ಲೆಂದು ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ಬಿಡುಗಡೆಯಾಗಿದೆ. ಆದರೆ ಸಮರ್ಪಕವಾಗಿ ಕಿಟ್ ವಿತರಣೆಯಾಗದೆ ಸಾವಿರಾರು ಕಿಟ್‌ಗಳ ಗೋದಾಮಿ ನಲ್ಲಿ ರಾಶಿ ಬಿದ್ದು ಅದರ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ ಎಂದು ಅವರು ದೂರಿದ್ದಾರೆ.

ಸಚಿವರು ಸನ್ಮಾನ, ಅಬಿನಂದನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಸರಕಾರ ತಕ್ಷಣ ಈ ಬಗ್ಗೆ ಗಮನಹರಿಸಿ ಆಹಾರ ಕಿಟ್‌ಗಳನ್ನು ವಿತರಿಸಬೇಕು. ಕಳೆದ ಬಾರಿ ಬಿಡುಗಡೆಯಾಗಿದ್ದ 5000 ಆಹಾರ ಕಿಟ್‌ಗಳಲ್ಲಿ ಒಂದನ್ನೂ ವಿತರಿಸದೆ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News