×
Ad

ಎಸ್‌ಐಓಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

Update: 2021-08-25 21:12 IST

ಉಡುಪಿ, ಆ.25: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕೆಮ್ಮಣ್ಣು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ನಿತೀಶ್ ಜಿ.ಅಂಚನ್ ಮತ್ತು ಧೀರಜ್ ಕುಂದರ್ ಅವರನ್ನು ಎಸ್‌ಐಓ ಹೂಡೆ ವತಿ ಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಅಬ್ದುಲ್ ಖಾದರ್ ಮಾತನಾಡಿ, ಜ್ಞಾನ ಅಂಧಕಾರದ ವಿರುದ್ಧದ ಅಸ್ತ್ರ ಆಗಿದೆ, ಶಿಕ್ಷಣದ ಜೊತೆಯಲ್ಲಿ ಪ್ರಾಮಾಣಿಕತೆ ಮತ್ತು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವ್ಯಕ್ತಿತ್ವ ನಮ್ಮದಾಗಿರಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಕ್ಸೇವಿಯರ್ ಪಿ.ವಿ. ಶುಭಹಾರೈಸಿದರು. ನಿಫಾಲ್, ಸನಾನ್, ಅಫ್ನಾನ್ ಮತ್ತು ಫರಾನ್ ಉಪಸ್ಥಿತರಿ ದ್ದರು. ಎಸ್‌ಐಓ ಹೂಡೆ ಅಧ್ಯಕ್ಷ ವಸಿಮ್ ಅಬ್ದುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜೀಶನ್ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ತಯುಬ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News