×
Ad

ಸೈಕ್ಯಾಟ್ರಿಕ್ ಕೌನ್ಸಿಲರ್ ಹುದ್ದೆಗೆ ಅರ್ಜಿ ಆಹ್ವಾನ

Update: 2021-08-25 21:13 IST

ಮಂಗಳೂರು, ಆ. 25: ದ.ಕ. ಜಿಲ್ಲಾ ಉಪ ಕಾರಾಗೃಹದಲ್ಲಿ ಖಾಲಿ ಇರುವ ಸೈಕ್ಯಾಟ್ರಿಕ್ ಕೌನ್ಸಿಲರ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಮನೋವಿಜ್ಞಾನದಲ್ಲಿ ಎಂ.ಫಿಲ್, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಎಸ್‌ಡಬ್ಲೂ (ವೈದ್ಯಕೀಯ ಮತ್ತು ಮನೋವೈದ್ಯಶಾಸ್ತ್ರ) ವಿದ್ಯಾರ್ಹತೆ ಹೊಂದಿರಬೇಕು. ಎರಡು ವರ್ಷ ಕೌನ್ಸಿಲಿಂಗ್ ಸರ್ವಿಸ್‌ನಲ್ಲಿ (ಸಮಾಲೋಚನೆ ಸೇವೆ) ಅನುಭವ ಉಳ್ಳವರಾರಬೇಕು. ಮಾಸಿಕ 25 ಸಾವಿರ ರೂ. ವೇತನ ನೀಡಲಾಗುವುದು.

ಆಸಕ್ತ 45 ವರ್ಷದೊಳಗಿನವರು ಮಂಗಳೂರಿನ ಜಿಲ್ಲಾ ಉಪ ಕಾರಾಗೃಹದ ಅಧೀಕ್ಷಕರ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ದ್ವಿ-ಪ್ರತಿಯಲ್ಲಿ ಸೆಪ್ಟಂಬರ್ 3ರೊಳಗೆ ಕಚೇರಿಗೆ ಸಲ್ಲಿಸುವಂತೆ ನೇಮಕಾತಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News