ಗಾಂಜಾ ಮಾರಾಟ: ಓರ್ವನ ಸೆರೆ
Update: 2021-08-25 21:21 IST
ಗಂಗೊಳ್ಳಿ, ಆ.25: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ನನ್ನು ಗಂಗೊಳ್ಳಿ ಪೊಲೀಸರು ಆ.24ರಂದು ಸಂಜೆ ವೇಳೆ ತ್ರಾಸಿ ಬೀಚ್ ಬಳಿಯ ಪಾರ್ಕ್‌ನಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ರವಿರಾಜ(46) ಎಂದು ಗುರುತಿಸಲಾಗಿದೆ. ಬಂಧಿತನಿಂದ 3000 ರೂ. ಮೌಲ್ಯದ ಒಟ್ಟು 100 ಗ್ರಾಂ ತೂಕದ ಗಾಂಜಾ ಹಾಗೂ ನಗದು 380 ರೂ. ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.