×
Ad

ಜೈನ ಮಠದಲ್ಲಿ ತ್ಯಾಗಿಗಳ ತಪೋವನ ಕಟ್ಟೆ ಉದ್ಘಾಟನೆ

Update: 2021-08-25 21:52 IST

ಕಾರ್ಕಳ : ಜೈನ ಮಠ ತ್ಯಾಗಿ ಭವನ ಆವರಣದಲ್ಲಿ ಆಮ್ರ ಕೂಷ್ಮಾಂಡಿನಿ ವೃಕ್ಷ -ತ್ಯಾಗಿಗಳ ತಪೋವನ ಕಟ್ಟೆ ಆ. 25ರಂದು ಉದ್ಘಾಟನೆಗೊಂಡಿತು. ಸ್ವಸ್ತಿ ಶ್ರೀ  ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರು ದೀಪ ಬೆಳಗಿಸಿ ತಪೋವನ ಕಟ್ಟೆಯನ್ನು ಲೋಕಾರ್ಪಣೆಗೊಳಿಸಿದರು. 

ಈ ವೇಳೆ ಮಾತನಾಡಿದ ವರ್ಧಮಾನ್‌ ಶಿಕ್ಷಣ ಸಂಸ್ಥೆ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ, ಇಂದಿನ ಒತ್ತಡದ ಬದುಕಿನಲ್ಲಿ ನೆಮ್ಮದಿಯ ಜೀವನ ಮರೆಯಾಗುತ್ತಿದೆ. ಧ್ಯಾನ, ಪ್ರಾರ್ಥನೆ, ಭಕ್ತಿಯ ಮೂಲಕ ಆಧ್ಯಾತ್ಮಿಕವಾಗಿ ತೊಡಗಿಸಿಕೊಂಡಲ್ಲಿ ನೆಮ್ಮದಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ತಪೋವನ ಕಟ್ಟೆ ಪೂರಕವಾಗಿರಲಿದೆ ಎಂದರು.

ಸಿಎ. ಪ್ರಭಾತ್ ಕುಮಾರ್ ಮತ್ತು ರಕ್ಷಾ ಪ್ರಭಾತ್ ಕುಮಾರ್ ಪೂಜಾ ಕರ್ತೃಗಳಾಗಿ ಹಾಗೂ ಪದ್ಮರಾಜ ಅತಿಕಾರಿ, ತಿಲಕ ಪದ್ಮರಾಜ್ ಅತಿಕಾರಿ ಹಾಗೂ ಕುಟುಂಬಸ್ಥರು ಸಂಘ ಸಂತರ್ಪಣೆಯ ದಾನಿಗಳಾಗಿ ಸೇವೆ ಸಲ್ಲಿಸಿದರು. 

ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ನಗರ ಪೊಲೀಸ್‌ ಠಾಣೆ ಎಸ್‌ ಮಧು ಬಿ.ಇ., ಅರುಣಾ ರಾಜೇಂದ್ರ ಕುಮಾರ್, ಸುಜಾತ ನೇಮಿರಾಜ ಆರಿಗ, ಶಿಶುಪಾಲ್‌ ಜೈನ್‌, ಮಹಾವೀರ್ ಹೆಗ್ಡೆ ಅಂಡಾರು, ಸಂಪತ್ ಸಾಮ್ರಾಜ್ಯ, ಜಗದೀಶ್ ಹೆಗ್ಡೆ, ಶಿಶುಪಾಲ ಜೈನ್, ಆದಿರಾಜ್ ಅಜ್ರಿ, ಕುಮಾರಯ್ಯ ಹೆಗ್ಡೆ, ವಿಖ್ಯಾತ್ ಜೈನ್, ವೀರೇಂದ್ರ ಜೈನ್ ಸೇರಿದಂತೆ ಕಾರ್ಕಳದ ವಿವಿಧ ಜೈನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪುರೋಹಿತ ವರ್ಗದವರು, ಕಾರ್ಕಳ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು, ಊರ ಶ್ರಾವಕ ಶ್ರಾವಿಕೆಯರು ಮಠದ ವ್ಯವಸ್ಥಾಪಕ ಧನಕೀರ್ತಿ ಕಡಂಬ ಉಪಸ್ಥಿತರಿದ್ದರು.

ಅಭಿಷ್ಟಾ ಪ್ರಾರ್ಥಿಸಿದರು. ಸುರೇಶ್ ಇಂದ್ರ ಶಾಂತಿ ಮಂತ್ರ ಪಠಿಸಿದರು. ವಿನಯ ಉದಯ್ ಕುಮಾರ್ ಸ್ವಾಗತಿಸಿದರು. ಶ್ರದ್ಧಾ ಕಾರ್ಯಕ್ರಮ ನಿರೂಪಿಸಿ, ವಾಣಿಶ್ರೀ ಮೃತ್ಯುಂಜಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News