ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇತ್ತೇ?

Update: 2021-08-26 18:03 GMT

ಮಾನ್ಯರೇ,

ಇತ್ತೀಚೆಗೆ ದಾವಣಗೆರೆಗೆ ಆಗಮಿಸಿದ್ದ ವಸತಿ ಸಚಿವರು ಇಲ್ಲಿನ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿರುವಾಗ, ‘‘ಮನೆ ಮಂಜೂರು ಮಾಡಲು ಹಣ ತೆಗೆದುಕೊಳ್ಳುತ್ತೀರಿ’’ ಎನ್ನುತ್ತಾ ತಾಲೂಕು ಪಂಚಾಯತ್ ಇ.ಒ. ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳತ್ತ ಕಣ್ಣು ಹಾಯಿಸಿ ‘‘ಇಷ್ಟು ದಿನ ತಿಂದಿದ್ದು ಸಾಕ್ರಪ್ಪ,ಇನ್ನಾದರೂ ಬಡವರ ಪರ ಕೆಲಸ ಮಾಡಿ’’ ಎಂದು ಮನವಿ ಮಾಡಿದ್ದಾರೆ. ಹಾಗಾದರೆ ಇಷ್ಟು ದಿನ ಇಲಾಖೆಯಲ್ಲಿ ಬಡವರ ಪರ ಕೆಲಸ ನಡೆಯದೆ ಅಧಿಕಾರಿಗಳ ಮಟ್ಟದಲ್ಲಿಯೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸಚಿವರಿಗೆ ಈಗಾಗಲೇ ಮಾಹಿತಿ ಇತ್ತು ಎನ್ನುವಂತಾಗಿದೆ. ಅವರ ಇಲಾಖೆಯ ಅಧಿಕಾರಿಗಳ ಮಟ್ಟದಲ್ಲೇ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಮಾಹಿತಿ ಇದ್ದು ಸಚಿವರು ಜಾಣ ಕುರುಡು ಪ್ರದರ್ಶಿಸಿದರೇ? ಭ್ರಷ್ಟಾಚಾರ ನಡೆಸಿದ್ದೇ ಆದರೆ ಸಚಿವರೇ ಖುದ್ದಾಗಿ ಕ್ರಮ ಕೈಗೊಳ್ಳಬಹುದಲ್ಲವೇ? ಸರಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕಾದ ಅಧಿಕಾರಿಗಳೇ ಭ್ರಷ್ಟಾಚಾರಕ್ಕಿಳಿದರೆ ಬಡವರಿಗೆ ತಲುಪಬೇಕಾದ ಯೋಜನೆಗಳಾದರೂ ತಲುಪುವುದು ಹೇಗೆ? ಸರಕಾರ ನೂರಾರು ಬಡವರಪರ ಯೋಜನೆಗಳನ್ನು ಜಾರಿಗೆ ತಂದರೂ ಅಧಿಕಾರಿಗಳ ದುರಾಸೆಯಿಂದ ದೇಶದಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ.
 

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News