ದ.ಕ.: ದ್ರವತ್ಯಾಜ್ಯ ನಿರ್ವಹಣಾ ಕಾರ್ಯಾಗಾರಕ್ಕೆ ಚಾಲನೆ
Update: 2021-08-27 11:37 IST
ಮಂಗಳೂರು, ಆ.27: ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-2ರ ಮಾರ್ಗಸೂಚಿಗಳನ್ವಯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಜಿಪಂ ಸಿಇಒ ಡಾ.ಕುಮಾರ್ ಶುಕ್ರವಾರ ಚಾಲನೆ ನೀಡಿದರು.
ವೈಜ್ಞಾನಿಕ ದ್ರವತ್ಯಾಜ್ಯ ನಿರ್ವಹಣೆಗೆ ಸೂಕ್ತ ತಂತ್ರಜ್ಞಾನಗಳನ್ನು ಗುರುತಿಸಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಮತ್ತು ಅನುಷ್ಠಾನಗೊಳಿಸಲು ಬೆಂಗಳೂರಿನ ಸಿಡಿಡಿ ಸಂಸ್ಥೆಯ ತಾಂತ್ರಿಕ ಸಹಕಾರದೊಂದಿಗೆ ಆ.27ರಿಂದ 29ರವರಗೆ ಜಿಲ್ಲೆಯ ಎಲ್ಲಾ ತಾಂತ್ರಿಕ ವರ್ಗದ ಅಧಿಕಾರಿ ಸಿಬ್ಬಂದಿಗೆ ಅಡ್ವಾನ್ಸ್ ಮಾಡ್ಯುಲ್ ತರಬೇತಿಯನ್ನು ಆಯೋಜಿಸಲಾಗಿದೆ.