ವಿಶ್ವನಾಥ ರೈ ಮೇಗಿನಗುತ್ತು ನಿಧನ
Update: 2021-08-27 12:12 IST
ಪುತ್ತೂರು, ಆ.27: ಕಾಂಗ್ರೆಸ್ ಮುಖಂಡ, ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಮೇಗಿನಗುತ್ತು ನಿವಾಸಿ ವಿಶ್ವನಾಥ ರೈ(76) ವಯೋಸಹಜ ಅನಾರೋಗ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರಾಗಿದ್ದ ವಿಶ್ವನಾಥ ರೈ 15 ವರ್ಷಗಳ ಕಾಲ ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾಗಿ, ಭಕ್ತಕೋಡಿ ಹಾಲು ಸೊಸೈಟಿಯ ಸದಸ್ಯರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.