ಬಿಜೆಪಿ ಶಾಸಕನ ವಿರುದ್ಧದ ಪ್ರಕರಣ ಹಿಂಪಡೆಯಲು ಉತ್ತರಪ್ರದೇಶ ಸರಕಾರದ ಮನವಿ ತಿರಸ್ಕರಿಸಿದ ನ್ಯಾಯಾಲಯ
Update: 2021-08-27 14:33 IST
ಲಕ್ನೊ: ಬಿಜೆಪಿ ಶಾಸಕ ಉಮೇಶ್ ಮಲಿಕ್ ವಿರುದ್ಧದ ಎರಡು ಪ್ರಕರಣಗಳನ್ನು ಹಿಂಪಡೆಯುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಉತ್ತರಪ್ರದೇಶದ ಮುಝಾಫರ್ ನಗರದಲ್ಲಿರುವ ವಿಶೇಷ ನ್ಯಾಯಾಲಯವು ಗುರುವಾರ ನಿರಾಕರಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ರಾಜ್ಯಗಳ ಹೈಕೋರ್ಟ್‌ಗಳ ಅನುಮತಿಯಿಲ್ಲದೆ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲಾಗುವುದಿಲ್ಲ ಎಂದು ಆಗಸ್ಟ್ 9 ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಬುಧನಾದ ಶಾಸಕರಾದ ಮಲಿಕ್ ಗುರುವಾರ ನ್ಯಾಯಾಲಯದ ಮುಂದೆ ಶರಣಾದರು ಹಾಗೂ ಅವರ ವಿರುದ್ಧ ನೀಡಲಾದ ಜಾಮೀನು ರಹಿತ ವಾರಂಟ್ ಅನ್ನು ಹಿಂಪಡೆಯಲು ಪ್ರಯತ್ನಿಸಿದರು.
147 (ಗಲಭೆಗಾಗಿ ಶಿಕ್ಷೆ), 148 (ಗಲಭೆ, ಮಾರಕ ಆಯುಧ ಸಂಗ್ರಹ) ಹಾಗೂ 149 (ಕಾನೂನುಬಾಹಿರ ಸಭೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಂಎಲ್‌ಎ ಹಾಗೂ ಇತರ ನಾಗರಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.