×
Ad

ಬಾಂಗ್ಲಾದೇಶ ವಿಮಾನದ ಪೈಲಟ್‍ಗೆ ಹೃದಯಾಘಾತ; ನಾಗ್ಪುರ್ ‍ನಲ್ಲಿ ತುರ್ತು ಭೂಸ್ಪರ್ಶ

Update: 2021-08-27 17:26 IST
ಸಾಂದರ್ಭಿಕ ಚಿತ್ರ

ನಾಗ್ಪುರ್: ಮಸ್ಕತ್‍ನಿಂದ ಢಾಕಾಗೆ ತೆರಳುತ್ತಿದ್ದ ಬಿಮಾನ್ ಬಾಂಗ್ಲಾದೇಶ ವಿಮಾನದ ಪೈಲಟ್‍ಗೆ ಹೃದಯಾಘಾತವುಂಟಾದ ಹಿನ್ನೆಲೆಯಲ್ಲಿ ವಿಮಾನವನ್ನು ನಾಗ್ಪುರ್ ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಈ ಬೋಯಿಂಗ್ ವಿಮಾನದಲ್ಲಿ 126 ಪ್ರಯಾಣಿಕರಿದ್ದರು. ವಿಮಾನ ಬೆಳಗ್ಗೆ 11.40ಕ್ಕೆ ನಾಗ್ಪುರ್ ನಿಲ್ದಾಣದಲ್ಲಿ ಬಂದಿಳಿದಿದ್ದು ತಕ್ಷಣ ಪೈಲಟ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಯ್ಪುರ್ ಸಮೀಪ ವಿಮಾನ ಹಾರಾಟ ನಡೆಸುತ್ತಿದ್ದಾಗ ಕೊಲ್ಕತ್ತಾ ಎಟಿಸಿಯನ್ನು ಸಂಪರ್ಕಿಸಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿತ್ತು. ಆಗ ಅಲ್ಲಿನ ಅಧಿಕಾರಿಗಳು ನಾಗ್ಪುರ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಲಹೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News