ಶುಶ್ರೂಷಕಿ ಹುದ್ದೆಗೆ ಆ.30ಕ್ಕೆ ನೇರ ಸಂದರ್ಶನ
Update: 2021-08-27 21:34 IST
ಮಂಗಳೂರು, ಆ. 27: ಕೋವಿಡ್ ವಿಭಾಗದಲ್ಲಿ ಶುಶ್ರೂಷಕರಾಗಿ ಕೆಲಸ ಮಾಡಲು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆ.30ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಕರೆಯಲಾಗಿದೆ.
ನರ್ಸಿಂಗ್‌ನಲ್ಲಿ ಡಿಪ್ಲೋಮಾ ಅಥವಾ ಬಿ.ಎಸ್.ಸಿ. ನರ್ಸಿಂಗ್ ಆಗಿರಬೇಕು. ಆಯ್ಕೆ ಆದವರಿಗೆ ವೇತನ 25,000 ರೂ. ವೇತನ ದೊರೆಯಲಿದೆ.
ಹೆಚ್ಚಿನ ಮಾಹಿತಿಗೆ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ ದೂ.ಸಂ.: 0824-2421351 ಅಥವಾ 0824-2425137ನ್ನು ಸಂಪರ್ಕಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.