×
Ad

ಹೊಸದಿಲ್ಲಿಯಲ್ಲಿ ಐವನ್, ಮೋಹನ್‌ರ ಕಚೇರಿ ಶುಭಾರಂಭ

Update: 2021-08-27 21:56 IST

ಮಂಗಳೂರು, ಆ.27: ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿಗಳಾದ ಐವನ್ ಡಿಸೋಜ ಮತ್ತು ಪಿ.ವಿ.ಮೋಹನ್ ಅವರ ಹೊಸದಿಲ್ಲಿಯ ಕಚೇರಿಯು ಶುಕ್ರವಾರ ಶುಭಾರಂಭಗೊಂಡಿತು.

ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ವಿಧಾನ ಪರಿಷತ್ ಸದಸ್ಯ ಜಬ್ಬಾರ್ ಖಾನ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಅಧ್ಯಕ್ಷ ಸಯೀದ್ ಶುಭಹಾರೈಸಿದರು.

ಈ ಸಂದರ್ಭ ಕೆಪಿಸಿಸಿ ಪದಾಧಿಕಾರಿ ವೆಂಕಟೇಶ್, ಪಿಯೂಸ್ ಮೊಂತೆರೊ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಶಬ್ಬೀರ್ ಎಸ್, ವಿವೇಕ್‌ರಾಜ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News