×
Ad

ಆ.31: ಕ್ರೀಡಾ ಭಾರತಿಯಿಂದ ಪ್ರೇಮ್ ನಾಥ್ ಉಳ್ಳಾಲ್ ಗೆ ಮೇ. ಧ್ಯಾನ್ ಚಂದ್ ಪ್ರಶಸ್ತಿ

Update: 2021-08-27 21:58 IST

ಮಂಗಳೂರು : ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯುಕ್ತ ಆ.31ರಂದು ಪ್ರೇಮನಾಥ್ ಉಳ್ಳಾಲ್ ಅವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಮತ್ತು ಜಾನಪದ ಕ್ರೀಡೆ ಕಂಬಳದಲ್ಲಿ ಶ್ರೀ ನಿವಾಸ ಗೌಡ, ಜಾವಲಿನ್ ಎಸೆತದಲ್ಲಿ ರಮ್ಯಶ್ರೀ ಜೈನ್ ಮತ್ತು ಯೋಗ ಸ್ಪರ್ಧೆ ಯಲ್ಲಿ ಪ್ರಣಮ್ಯ ಇವರಿಗೆ ಕ್ರೀಡಾ ಸಾಧನೆಗಾಗಿ ಜೀಜಾಬಾಯಿ ಪ್ರಶಸ್ತಿ ಪ್ರಧಾನ ಮಾಡಲಾ ಗುವುದು ಎಂದು ಕ್ರೀಡಾ ಭಾರತಿಯ ಅಧ್ಯಕ್ಷ ಕಾರ್ಯಪ್ಪ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈಗಾಗಲೇ ಆನ್ ಲೈನ್ ನಲ್ಲಿ ಏರ್ಪಡಿಸಿದ್ದ ಕ್ರೀಡಾ ರಸ ಪ್ರಶ್ನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ,ಕೊಡಗು,ಜಿಲ್ಲೆಯ 622 ಮಂದಿ ಭಾಗವಹಿಸಿದ್ದಾರೆ.  ಆನ್ ಲೈನ್ ಮೂಲಕ ನಡೆಯಲಿರುವ ಕ್ರೀಡಾ ಭಾಷಣ ಸ್ಪರ್ಧೆಯ ವಿಜೇತರಿಗೆ ಸಮಾರಂಭದಲ್ಲಿ ಪ್ರಶಸ್ತಿ, ನಗದು ಪುರಸ್ಕಾರ ಗಳೊಂದಿಗೆ ಸನ್ಮಾನಿಸಲಾಗುವುದು ಎಂದು ಕಾರ್ಯಪ್ಪ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ಸಂಯೋಜಕ ಬೋಜರಾಜ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರು, ಕಾರ್ಯದರ್ಶಿ ಹರೀಶ್ ರೈ, ಕರುಣಾಕರ ಶೆಟ್ಟಿ, ಮಹಿಳಾ ಪ್ರಮುಖ್ ಹೇಮಪ್ರಭಾ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News