×
Ad

ಏಪಿಸ್ ಕಿಡ್ನಿಸ್ಟೋನ್ ವತಿಯಿಂದ ಕಿಡ್ನಿ ಕಲ್ಲು ತೆರವಿಗೆ ಅತ್ಯಾಧುನಿಕ ಲೇಸರ್ ಚಿಕಿತ್ಸೆ

Update: 2021-08-27 22:03 IST

ಮಂಗಳೂರು : ನಗರದ ಏಪಿಸ್ ಕಿಡ್ನ ಸ್ಟೋನ್ ಇನ್ ಸ್ಟಿಟ್ಯೂಟ್ ವತಿಯಿಂದ ಅತ್ಯಾಧುನಿಕ ಲೇಸರ್ ತಂತ್ರಜ್ಞಾನದ ಮೂಲಕ ಮೂತ್ರಪಿಂಡದ 5.5 ×2.5 ಸೆ.ಮೀ ಕಲ್ಲುಗಳನ್ನು ಕಿಡ್ನಿ ಪಂಕ್ಚರ್ ಮಾಡದೆ  ತೆಗೆಯುವ  ಮೂಲಕ ಪ್ರಥಮ ಬಾರಿಗೆ  ಈ ಸಾಧನೆ ಮಾಡಿದೆ ಎಂದು ಎಪಿಸ್ ಕಿಡ್ನಿಸ್ಟೋನ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಡಾ.ಮೊಹಮ್ಮದ್ ಸಲೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕಿಡ್ನಿ ಪಂಕ್ಚರ್ ಶಸ್ತ್ರ ಚಿಕಿತ್ಸೆಯ ಮೂಲಕ ರಕ್ತಸ್ರಾವ, ಕಿಡ್ನಿ ಕ್ರೀಯೆಗೆ ಹಾನಿ,ಡಯಾ ಲಿಸೀಸ್  ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಕಾರಣ ವಾಗುವ ಸಾಧ್ಯತೆ ಗಳಿರುತ್ತದೆ.ಆದರೆ ಏಪಿಸ್ ನಡೆಸುವ (ಆರ್ ಐ ಆರ್ ಎಸ್ -ಟಿಎಫ್ಎಲ್ -ಡಿಎಸ್ )ಅತ್ಯಾಧುನಿಕ ಲೇಸರ್‌ ತಂತ್ರಜ್ಞಾನದ ಕಿಡ್ನಿ ನಿರ್ಮೂಲನ ಈ ಎಲ್ಲಾ ಸಮಸ್ಯೆ ಗಳಿಂದ ಮುಕ್ತವಾಗಿದೆ. ರೋಗಿಯನ್ನು 24ಗಂಟೆಗಳ ಒಳಗೆ ಡಿಸ್ಟಾರ್ಜ್ ಮಾಡಲಾಗುತ್ತದೆ ಎಂದು ಡಾ.ಸಲೀಂ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಾಲುದಾರ ಅಬೂಯಾಸಿರ್, ಉಮೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News