ಕೊರೋನ ವೈರಸ್ ನ ಮೂಲ: ಸ್ಪಷ್ಟ ನಿರ್ಧಾರಕ್ಕೆ ಬರಲು ಅಮೆರಿಕದ ಗುಪ್ತಚರ ಏಜೆನ್ಸಿಗಳು ವಿಫಲ

Update: 2021-08-28 17:32 GMT

 ವಾಶಿಂಗ್ಟನ್,ಆ.28: ಕೋವಿಡ್19ಗೆ ಕಾರಣವಾದ ಕೊರೋನ ವೈರಸ್ನ ಮೂಲದ ನಿಖರತೆಯ ಬಗ್ಗೆ ಯಾವುದೇ ದೃಢನಿರ್ಧಾರಕ್ಕೆ ಬರುವಲ್ಲಿ ಅಮೆರಿಕದ ಬೇಹುಗಾರಿಕೆ ವಿಫಲವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೊರೋನ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಸಲಾಗಿದೆಯೆಂಬ ವಾದವನ್ನು ಅವರು ನಂಬುವುದಿಲ್ಲವಾದರೂ, ಅವರು ಚೀನಾದ ಪ್ರಯೋಗಾಲಯದಲ್ಲಿ ಸೃಷ್ಟಿಯಾಯಿತೇ ಇಲ್ಲ ಪ್ರಾಕೃತಿಕವಾಗಿ ಉಗಮವಾಯಿತೇ ಎಂಬ ಬಗ್ಗೆಯೂ ಅವರಲ್ಲಿ ಭಿನ್ನಾಭಿಪ್ರಾಯಗಳಿವೆ.

ಕೊರೋನ ವೈರಸ್ನ ಮೂಲದ ಬಗ್ಗೆ ವಿಸ್ತೃತವಾದ ಪರಾಮರ್ಶೆಯನ್ನು ನಡೆಸುವಂತೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ನೀಡಿದ್ದ ಆದೇಶ ನೀಡಿದ್ದರು.
    ‌
ಕೋವಿಡ್19ಗೆ ಕಾರಣವಾಗುವ ಸಾರ್ಸ್-ಕೋವ್ 2 ವೈರಸ್ ಸೋಂಕು 2019ರ ನವೆಂಬರ್ ಗಿಂತ ಮೊದಲು ಮಾನವರಿಗೆ ತಗಲಿರಲಿಲ್ಲ. ಆದರೆ ಡಿಸೆಂಬರ್ 2019ರ ವೇಳೆಗೆ ಅದು ಚೀನಾದ ವುಹಾನ್ ನಗರದಲ್ಲಿ ಕೋವಿಡ್-19 ಸೋಂಕಿನ ಮೊದಲ ಪ್ರಕರಣ ವರದಿಯಾಗಿತ್ತು ಎಂದವರು ಹೇಳಿದ್ದರು.
   
ಅಮೆರಿಕದ ಬಹುತೇಕ ಬೇಹುಗಾರಿಕಾ ಏಜೆನ್ಸಿಗಳು ಕೊರೋನಾ ವೈರಸ್ ಎಂದು ಕರೆಯಲಾಗುವ ಸಾರ್ಸ್-ಕೋವ್-2 ವೈರಸ್ ಅನ್ನು ಪ್ರಯೋಗಾಲಯದಲ್ಲಿ ಕುಲಾಂತರಗೊಳಿಸಿ ಸೃಷ್ಟಿಸಲಾಗಿಲ್ಲವೆಂಬ ವಾದವನ್ನು ಸ್ಪಷ್ಚವಾಗಿ ಅಲ್ಲಗೆಳೆಯುತ್ತಿಲ್ಲ. ಆದರೆ ಎರಡು ಏಜೆನ್ಸಿಗಳು ಮಾತ್ರ ಕೊರೋನ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದೆಯೆಂಬುದಕ್ಕೆ ಸಮರ್ಪಕ ಆಧಾರವಿಲ್ಲವೆಂದು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News