×
Ad

ಇನ್‌ಲ್ಯಾಂಡ್‌ನ ಹೊಸ ಯೋಜನೆಗೆ ಭಾರಿ ರಿಯಾಯಿತಿ ಘೋಷಣೆ: ಸ್ವಂತ ಮನೆ ಹೊಂದುವ ಕನಸು ಸಾಕಾರಕ್ಕೆ ಸುವರ್ಣಾವಕಾಶ

Update: 2021-08-28 23:08 IST

ಮಂಗಳೂರು: ಕರ್ನಾಟಕದ ಮುಂಚೂಣಿಯ ನಿರ್ಮಾಣ ಸಂಸ್ಥೆ ಇನ್‌ಲ್ಯಾಂಡ್ ಬಿಲ್ಡರ್ಸ್, ಹಲವಾರು ಸಮಯಗಳಿಂದ ಮನೆ ಖರೀದಿಯ ಕನಸು ಹೊಂದಿರುವ ಗ್ರಾಹಕರಿಗೆ ಉದ್ಘಾಟನಾ ಕೊಡುಗೆಯಾಗಿ ಬೃಹತ್ ರಿಯಾಯಿತಿ ದರ ಘೋಷಿಸುವ ಮೂಲಕ ಸುವರ್ಣಾವಕಾಶ ಕಲ್ಪಿಸಿದೆ.

ಕೂಳೂರು-ಕಾವೂರು ರಸ್ತೆಯಲ್ಲಿರುವ ಹೊಸ ಯೋಜನೆ ಇನ್‌ಲ್ಯಾಂಡ್ ಸನ್‌ಲೈಟ್‌ನ ಉದ್ಘಾಟನೆಯ ಕೊಡುಗೆಯಾಗಿ ಬೃಹತ್ ದರ ಕಡಿತ ಘೋಷಿಸಿದೆ. ಮನೆ ಖರೀದಿ ಮಾಡುವವರಿಗೆ 8 ಲಕ್ಷದಿಂದ 11  ಲಕ್ಷ ರೂ. ತನಕ ರಿಯಾಯಿತಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕೋವಿಡ್ ರೋಗದ ಈ ಕಾಲಘಟ್ಟದಲ್ಲಿ ಕುಟುಂಬದ ಜತೆ ಸ್ವಂತ ಮನೆಯಲ್ಲಿ ಸುರಕ್ಷಿತವಾಗಿ ವಾಸ ಮಾಡಬೇಕು ಎನ್ನುವ ಆಕಾಂಕ್ಷೆಯನ್ನು ಇನ್‌ಲ್ಯಾಂಡ್ ಸಾಕಾರಗೊಳಿಸುತ್ತಿದೆ.

ಇನ್‌ಲ್ಯಾಂಡ್ ಸನ್‌ಲೈಟ್ ವಿನೂತನ ಅಪಾರ್ಟ್‌ಮೆಂಟ್ ಕಟ್ಟಡವನ್ನು ಮುಂಬೈಯ ವಿನ್ಯಾಸಕಾರರು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಆಕರ್ಷಣೀಯವಾಗಿ ನಿರ್ಮಾಣ ಮಾಡಿದ್ದಾರೆ. ಕೂಳೂರು-ಕಾವೂರು ರಸ್ತೆಯಲ್ಲಿ ಸಂಚರಿಸುವವರಿಗೆ ಈ ಅಪಾರ್ಟ್‌ಮೆಂಟ್ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ಹಲವು ಯೊೀಜನೆಗಳು ಅನುಷ್ಠಾನಗೊಳ್ಳುತ್ತಿದೆ.

ಅಪಾರ್ಟ್‌ಮೆಂಟ್ ಪರಿಸರದಲ್ಲಿ ಅತ್ಯುತ್ತಮ ಶಾಲೆಗಳಾದ ಪೊದಾರ್ ಇಂಟರ್‌ನ್ಯಾಷನಲ್ ಮತ್ತು ಬಿಜಿಎಸ್ ಶಾಲೆಗಳು, ಡಾ.ಎಂ.ವಿ.ಶೆಟ್ಟಿ ಕಾಲೇಜು, ಕರಾವಳಿ ಕಾಲೇಜು, ಮಹೇಶ್ ಕಾಲೇಜು ಮತ್ತು ಸಮೀದಪಲ್ಲೇ ಶಾಪಿಂಗ್ ಸೆಂಟರ್‌ಗಳು, ಮಾರುಕಟ್ಟೆಗಳಿವೆ. ಸುತ್ತಲೂ ಹಸಿರು ಪರಿಸರ, ತಂಪಾದ ಗಾಳಿ ಮನಸ್ಸಿಗೂ ಮುದ ನೀಡುವಂತಿದೆ.

ಮಂಗಳೂರು ನಗರದಲ್ಲಿ ಸ್ವಂತ ಮನೆ ಹೊಂದುವ ಕನಸು ಹೊಂದಿದವರಿಗೆ ಗುಣಮಟ್ಟದ ಮನೆಗಳನ್ನು ಕೈಗೆಟಕುವ ದರದಲ್ಲಿ ನೀಡುವುದು ಇನ್‌ಲ್ಯಾಂಡ್ ಸಂಸ್ಥೆಯ ಉದ್ದೇಶ. 2 ಹಾಗೂ 3 BHK ಅಪಾರ್ಟ್‌ಮೆಂಟ್‌ಗಳು ಲಭ್ಯವಿದೆ.

ಗ್ರಾಹಕರಿಗೆ ಈ ಬೃಹತ್ ರಿಯಾಯಿತಿ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಲು ಇದೊಂದು ಅವಕಾಶ ಎಂದು ಸಂಸ್ಥೆಯ ಮುಖ್ಯಸ್ಥ ಸಿರಾಜ್ ಅಹ್ಮದ್ ತಿಳಿಸಿದ್ದಾರೆ. ಸೆ.5 ರ ತನಕ ಮಾತ್ರ ಇನ್‌ಲ್ಯಾಂಡ್ ಸನ್‌ಲೈಟ್ ಅಪಾರ್ಟ್‌ಮೆಂಟ್ ಖರೀದಿಸುವ ಗ್ರಾಹಕರಿಗೆ ಈ ರಿಯಾಯಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಆದ್ದರಿಂದ ಮನೆ ಹೊಂದುವ ಕನಸ್ಸನ್ನು ಹೊಂದಿರುವವರು ಆದಷ್ಟು ಶೀಘ್ರ ವೆಬ್‌ಸೈಟ್: www.inlandbuilders.net, ಇ-ಮೇಲ್: mktg.mlr@inlandbuilders.net ಗೆ ಸಂಪರ್ಕಿಸಬಹುದು ಎಂದು ಪ್ರವರ್ತಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News