×
Ad

ವಾಹನ, ಆಯುಧ ಸಹಿತ ಸರಕಾರಿ ಸೊತ್ತುಗಳನ್ನು ಒಪ್ಪಿಸುವಂತೆ ನಾಗರಿಕರಿಗೆ ತಾಲಿಬಾನ್ ಸೂಚನೆ

Update: 2021-08-28 23:11 IST
photo: twitter.com/TOLOnews

ಕಾಬೂಲ್,ಆ.28: ಮಹತ್ವದ ಬೆಳವಣಿಗೆಯೊಂದರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ವಾಹನಗಳು, ಶಸ್ತ್ರಾಸ್ತ್ರಗಳು,ಮದ್ದುಗುಂಡುಗಳು ಸೇರಿದಂತೆ ಸರಕಾರಿ ಸೊತ್ತುಗಳನ್ನು ಹೊಂದಿರುವವರು ಒಂದು ವಾರದೊಳಗೆ ಅವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಒಂದು ವಾರದೊಳಗೆ ಒಪ್ಪಿಸಬೇಕೆಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ತಿಳಿಸಿರುವುದಾಗಿ ಟೊಲೋ ನ್ಯೂಸ್ ರವಿವಾರ ವರದಿ ಮಾಡಿದೆ. ಈ ಬಗ್ಗೆ ಮುಜಾಹಿದ್ ಟ್ವೀಟ್ ಮಾಡಿದ್ದು, ಕಾಬೂಲ್ನಲ್ಲಿ ಸರಕಾರಕ್ಕೆ ಸೇರಿದ ಸರಕುಗಳು, ಸಲಕರಣೆಗಳು, ವಾಹನಗಳು, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಸ್ವಂಯಪ್ರೇರಿತವಾಗಿ ಇಸ್ಲಾಮಿಕ್ ಎಮಿರೇಟ್ನ ಸಂಬಂಧಪಟ್ಟ ಸಂಸ್ಥೆಗಳಿಗೆ ಹಸ್ತಾಂತರಿಸಬೇಕೆಂದು ತಿಳಿಸಿದ್ದಾರೆ.


ಈಮಧ್ಯೆ ಆರೋಗ್ಯಪಾಲನಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಮಹಿಳೆಯರು ತಮ್ಮ ವಾಪಾಸಗಬೇಕೆಂದು ತಾಲಿಬಾನ್ ಸೂಚಿಸಿದೆ. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅವರಿಗೆ ಇಸ್ಲಾಮಿಕ್ ಎಮಿರೇಟ್ನಿಂದ ಯಾವುದೇ ಅಡ್ಡಿ ಎದುರಾಗುವುದಿಲ್ಲವೆಂದು ಅದು ಭರವಸೆ ನೀಡಿದೆ. ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಹಲವಾರು ಮಂದಿ ತರಬೇತುಗೊಂಡ ಹಾಗೂ ಸುಶಿಕ್ಷತ ಅಫ್ಘನ್ನರು ದೇಶದಿಂದ ಪಲಾಯನ ಮಾಡಿರುವುದರಿಂದ ಸಾರ್ವಜನಿಕ ಸೇವೆಗಳು ಬಾಧಿತವಾಗಿರುವ ಬೆನ್ನಲ್ಲೇ ತಾಲಿಬಾನ್ ಈ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News