×
Ad

ಕೋವಿಡ್ ಸಮಯದಲ್ಲಿ 'ಸ್ವಚ್ಛ ಭಾರತ ಮಿಷನ್' ವೇಗ ಕಾಯ್ದುಕೊಳ್ಳಲು ಪ್ರಧಾನಿ ಮೋದಿ ಕರೆ

Update: 2021-08-29 12:32 IST

ಹೊಸದಿಲ್ಲಿ: ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ 'ಸ್ವಚ್ಛ ಭಾರತ್' ಮಿಷನ್ ವೇಗವನ್ನು ಕಾಯ್ದುಕೊಳ್ಳುವಂತೆ ರವಿವಾರ ತಮ್ಮ ಮಾಸಿಕ ‘ಮನ್ ಕಿ ಬಾತ್’ ಭಾಷಣದಲ್ಲಿ  ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ಕರೆ ನೀಡಿದರು.

ಮಧ್ಯಪ್ರದೇಶದ ಇಂದೋರ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕಳೆದ ಹಲವು ವರ್ಷಗಳಿಂದ ಈ ನಗರವು ಸ್ವಚ್ಛತೆಯ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. "ಸ್ವಚ್ಛ ನಗರ" ಎಂಬ ಪ್ರಶಸ್ತಿಯನ್ನು ಸತತವಾಗಿ ಪಡೆದ ನಂತರ  ಇಂದೋರ್ ಈಗ ಭಾರತದ ಮೊದಲ 'ವಾಟರ್ ಪ್ಲಸ್' ನಗರವಾಗುವ ಮೂಲಕ ಮತ್ತೊಂದು ಗರಿ ಸೇರಿಸಿಕೊಂಡಿದೆ ಎಂದು  ಹೇಳಿದರು.

ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಭಾರತೀಯ ಸಂಸ್ಕೃತಿಯಲ್ಲಿ ಸೃಜನಶೀಲ ಶಕ್ತಿಗಳ ಸಂಕೇತವಾಗಿ ಪರಿಗಣಿಸಲ್ಪಟ್ಟಿರುವ ಭಗವಾನ್ ವಿಶ್ವಕರ್ಮರೊಂದಿಗೆ ಕೌಶಲ್ಯ ಅಭಿವೃದ್ಧಿಗೆ ಸಂಬಂಧವಿದೆ ಎಂದು  ಹೇಳಿದರು.

 "ನಾವು ಪ್ರತಿಭೆಯನ್ನು ಗೌರವಿಸಬೇಕು. ಕೌಶಲ್ಯದಿಂದಿರಲು ನಾವು ಶ್ರಮಿಸಬೇಕು. ನಾವು ಕೌಶಲ್ಯ ಹೊಂದಿದ್ದಕ್ಕೆ ಹೆಮ್ಮೆ ಪಡಬೇಕು" ಎಂದು ಪಿಎಂ ಮೋದಿ ಹೇಳಿದರು.

ದೇಶದಲ್ಲಿ 62 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ. ಆದರೆ ಜನರು ಇನ್ನೂ ಎಚ್ಚರಿಕೆಯಿಂದ ಹಾಗೂ  ಜಾಗರೂಕರಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News