ಹರ್ಯಾಣ: ಪೊಲೀಸರ ಲಾಠಿಚಾರ್ಜ್ ಮರುದಿನ ರೈತರಿಂದ ಮಹಾಪಂಚಾಯತ್

Update: 2021-08-29 07:57 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕರ್ನಾಲ್ ಜಿಲ್ಲೆಯ ಘರೌಂಡಾ ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಹರ್ಯಾಣ ಪೊಲೀಸರು ಲಾಠಿ ಚಾರ್ಜ್ ಮಾಡಿದ ಒಂದು ದಿನದ ನಂತರ ನುಹ್ ನಲ್ಲಿ ರವಿವಾರ ರೈತರ ಮಹಾಪಂಚಾಯತ್ ನಡೆಯುತ್ತಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ನಾಯಕರು ಹಾಗೂ ಭಾರತೀಯ ಕಿಸಾನ್ ಯೂನಿಯನ್, ಡಾ. ದರ್ಶನ್ ಪಾಲ್, ರಾಕೇಶ್ ಟಿಕಾಯತ್ ,ಬಲಬೀರ್ ಸಿಂಗ್ ರಾಜೇವಾಲ್ ಹಾಗೂ  ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಸಭೆಯಲ್ಲಿ ಭಾಗವಹಿಸಿದ್ದಾರೆ.

ನಿನ್ನೆಯ ಹಿಂಸಾಚಾರಕ್ಕೆ ಮುನ್ನವೇ ಇಂದಿನ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.

ಶನಿವಾರದ ಹಿಂಸಾಚಾರವನ್ನು ಪ್ರತಿಭಟಿಸಲು ರೈತ ಗುಂಪುಗಳು ಜಲಂಧರ್-ದಿಲ್ಲಿ ಹೆದ್ದಾರಿಯನ್ನು ಎರಡು ಗಂಟೆಗಳ ಕಾಲ (ಮಧ್ಯಾಹ್ನ 2 ರಿಂದ) ನಿರ್ಬಂಧಿಸುವ ಯೋಜನೆಯನ್ನು ಘೋಷಿಸಿವೆ. ಎಸ್‌ಕೆಎಂ ಜಲಂಧರ್‌ನ ಪಿಎಪಿ ಚೌಕ್‌ನಲ್ಲಿ ಪ್ರತಿಭಟನೆಯನ್ನು ನಡೆಸುತ್ತದೆ ಹಾಗೂ  ಈ ಸಮಯದಲ್ಲಿ, ಅಮೃತಸರ ಮತ್ತು ಲುಧಿಯಾನಕ್ಕೆ ಹೋಗುವ ರಸ್ತೆಗಳನ್ನು ಮುಚ್ಚುವ ನಿರೀಕ್ಷೆಯಿದೆ.

ನೆರೆಯ ಪಂಜಾಬ್‌ನಲ್ಲಿ, ಬಿಕುಯು (ಉಗ್ರಾಣ) ಮುಖ್ಯಸ್ಥ ಜೋಗಿಂದರ್ ಉಗ್ರನ್, ರಾಜ್ಯದ ರೈತರು ಎರಡು ಗಂಟೆಗಳ ಕಾಲ ರಸ್ತೆಗಳು ಮತ್ತು ಹೆದ್ದಾರಿಗಳನ್ನು ನಿರ್ಬಂಧಿಸುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಮನೋಹಲ್ ಲಾಲ್  ಖಟ್ಟರ್ ನೇತೃತ್ವದ ರಾಜ್ಯಮಟ್ಟದ ಸಭೆಯನ್ನು ವಿರೋಧಿಸಿದ ಸಹ ರೈತರ ವಿರುದ್ಧ "ಕ್ರೂರ" ಪೊಲೀಸ್ ಕ್ರಮವನ್ನು ವಿರೋಧಿಸಿ ನಿನ್ನೆ ಮಧ್ಯಾಹ್ನ ರೈತರು ಹರ್ಯಾಣದಾದ್ಯಂತ ಅನೇಕ ರಸ್ತೆಗಳಿಗೆ ತಡೆಯೊಡ್ಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News