ಹಿಂದೂ ದೇವತೆಗಳಿಗೆ ಅವಮಾನ ಆರೋಪ: ʼಕಾಮಸೂತ್ರʼ ಗ್ರಂಥವನ್ನು ಸುಟ್ಟು ಹಾಕಿದ ಬಜರಂಗದಳ ಕಾರ್ಯಕರ್ತರು

Update: 2021-08-29 08:11 GMT
Photo: twitter/dpBhattaET

ಅಹ್ಮದಾಬಾದ್:‌ ಹಿಂದೂ ದೇವ ದೇವತೆಗಳನ್ನು ಅಶ್ಲೀಲವಾಗಿ ತೋರಿಸುತ್ತಿದೆ ಎಂದು ಆರೋಪಿಸಿ ʼಕಾಮಸೂತ್ರʼ ಗ್ರಂಥವನ್ನು ಪುಸ್ತಕ ಮಳಿಗೆಯೊಂದರ ಮುಂಭಾಗದಲ್ಲಿ ಸುಟ್ಟು ಹಾಕಿದ ಘಟನೆಯು ಗುಜರಾತ್‌ ನ ಅಹ್ಮದಾಬಾದ್‌ ನಲ್ಲಿ ನಡೆದಿದೆ. ಭಾರತೀಯ ಪುರಾತನ ತತ್ವಜ್ಞಾನಿ ವಾತ್ಸಾಯನ ಸಂಸ್ಕೃತ ಭಾಷೆಯಲ್ಲಿ ಪ್ರೀತಿ ಮತ್ತು ಲೈಂಗಿಕತೆಯ ಕುರಿತು ಬರೆದ ಗ್ರಂಥವಾಗಿದೆ ಇದು.

ಪುಸ್ತಕವನ್ನು ಸುಡುವ ವೇಳೆ ನೆರೆದಿದ್ದ ಕಾರ್ಯಕರ್ತರು ಜೈಶ್ರೀರಾಂ ಹಾಗೂ ಹರಹರ ಮಹಾದೇವ್‌ ಘೋಷಣೆಗಳನ್ನು ಕೂಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಯಾವ ಪುಸ್ತಕ ಮಳಿಗೆಯನ್ನು ಗುರಿಯಾಗಿಸಿದ್ದರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು scroll.in ವರದಿ ಮಾಡಿದೆ.

ಇನ್ನು ಮುಂದೆ ವಾತ್ಸಾಯನ ಕಾಮಸೂತ್ರ ಪುಸ್ತಕವನ್ನು ಮಳಿಗೆಯಲ್ಲಿ ಮಾರಾಟ ಮಾಡಿದರೆ ಸಂಪೂರ್ಣ ಪುಸ್ತಕ ಮಳಿಗೆಯನ್ನೇ ಸುಟ್ಟು ಹಾಕುವುದಾಗಿ ಬಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ ಎಂದು indiatoday ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News