×
Ad

ಆಗ್ರಾ: ಕುಕ್ಕರ್‌ ನಲ್ಲಿ ಸಿಲುಕಿಕೊಂಡ ಪುಟ್ಟ ಮಗುವಿನ ತಲೆ ಹೊರ ತೆಗೆದ ವೈದ್ಯರ ತಂಡ

Update: 2021-08-29 14:56 IST
ಸಾಂದರ್ಭಿಕ ಚಿತ್ರ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರ ತಂಡವು ಎರಡು ಗಂಟೆಗಳ ಕಠಿಣ ಪರಿಶ್ರಮದ ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಸಿಲುಕಿಕೊಂಡಿದ್ದ ಮಗುವಿನ ತಲೆಯನ್ನು ಹೊರ ತೆಗೆಯುವಲ್ಲಿ  ಯಶಸ್ವಿಯಾಗಿದೆ.

ಕುಟುಂಬ ಸದಸ್ಯರ ಪ್ರಕಾರ, ಒಂದೂವರೆ ವರ್ಷದ ಗಂಡು ಮಗು ಶನಿವಾರ ನಗರದ ತನ್ನ ಚಿಕ್ಕಪ್ಪನ ಮನೆಯಲ್ಲಿ ಆಟವಾಡುತ್ತಿದ್ದಾಗ ಮಗುವಿನ ತಲೆ ಕುಕ್ಕರ್ ಒಳಗೆ ಸಿಲುಕಿಕೊಂಡಿದೆ.

ಕುಟುಂಬದ ಸದಸ್ಯರು ಮನೆಯಲ್ಲಿ ಮಗುವಿನ  ತಲೆಯನ್ನು ಕುಕ್ಕರ್ ನಿಂದ ಹೊರತೆಗೆಯಲು ಪ್ರಯತ್ನಿಸಿದರೂ ವಿಫಲರಾದರು. ನಂತರ ಅವರು ಮಗುವನ್ನು  ಎಸ್‌ಎಂ ಚಾರಿಟೇಬಲ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಡಾ. ಫರ್ಹತ್ ಖಾನ್ ಹಾಗೂ  ಅವರ ತಂಡವು ಎರಡು ಗಂಟೆಗಳ ಶ್ರಮದ ಪ್ರಯತ್ನದ ನಂತರ ಮಗುವನ್ನು ಉಳಿಸಲು ಸಾಧ್ಯವಾಯಿತು.

"ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಕುಕ್ಕರ್ ಅನ್ನು ಗ್ರೈಂಡರ್ ಯಂತ್ರದ ಸಹಾಯದಿಂದ ಕತ್ತರಿಸಲಾಗಿದೆ ... ನಾವು ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಾಯಿತು" ಎಂದು ಡಾ. ಖಾನ್ ಹೇಳಿದರು.

ಮಗುವನ್ನು ಉಳಿಸಿದ್ದಕ್ಕಾಗಿ ಕುಟುಂಬ ಸದಸ್ಯರು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

"ನಾವು ವೈದ್ಯರ ತಂಡಕ್ಕೆ ನಮ್ಮ ಪ್ರಾಮಾಣಿಕ ಧನ್ಯವಾದಗಳನ್ನು ತಿಳಿಸುತ್ತೇವೆ. ಅವರ ಪ್ರಯತ್ನದಿಂದಾಗಿ ಮಗು ಉಳಿದಿದೆ" ಎಂದು ಕುಟುಂಬದ ಸದಸ್ಯರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News