×
Ad

ರೈತರ ಮೇಲಿನ ಲಾಠಿಚಾರ್ಜ್ ಗೆ ಹರ್ಯಾಣ ಮುಖ್ಯಮಂತ್ರಿ ಕ್ಷಮೆ ಕೋರಬೇಕು: ಮೇಘಾಲಯ ರಾಜ್ಯಪಾಲ

Update: 2021-08-29 15:16 IST

ಹೊಸದಿಲ್ಲಿ: ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ಮೂರು ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿರುವ ರೈತರನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ ಹಾಗೂ  ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದಾರೆ.  ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್  ಖಟ್ಟರ್ ನಿನ್ನೆ ಕರ್ನಾಲ್ ನಲ್ಲಿ ನಡೆದ  "ಕ್ರೂರ" ಪೊಲೀಸ್ ಲಾಠಿ ಚಾರ್ಜ್ ಗೆ  ಕ್ಷಮೆ ಕೇಳಬೇಕು ಎಂದು ಮಲಿಕ್ ಆಗ್ರಹಿಸಿದ್ದಾರೆ.  ಲಾಠಿ ಚಾರ್ಜ್ ನಲ್ಲಿ  10 ರೈತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ .

ರೈತರ "ತಲೆ ಒಡೆಯಲು" ಪೊಲೀಸರಿಗೆ ಆದೇಶಿಸಿದ ವೀಡಿಯೊ ಆನ್‌ಲೈನ್‌ನಲ್ಲಿ ಹೊರಹೊಮ್ಮಿದ ನಂತರ ಜಿಲ್ಲೆಯ ಉನ್ನತ ಅಧಿಕಾರಿಯನ್ನು ವಜಾಗೊಳಿಸುವಂತೆ ರಾಜ್ಯಪಾಲ ಮಲಿಕ್ ಒತ್ತಾಯಿಸಿದರು., ಇದು ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.

"ಮನೋಹರ್ ಲಾಲ್ ಖಟ್ಟರ್ ರೈತರ ಕ್ಷಮೆ ಕೇಳಲೇಬೇಕು ... ಹರ್ಯಾಣ ಮುಖ್ಯಮಂತ್ರಿ ರೈತರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ತಮ್ಮ ಬಲ ಬಳಸಬಾರದು ... ಬಲ ಬಳಸಬೇಡಿ ಎಂದು ನಾನು ಉನ್ನತ ನಾಯಕತ್ವಕ್ಕೆ ಹೇಳಿದ್ದೇನೆ" ಎಂದು ಮಲಿಕ್ NDTV ಗೆ ತಿಳಿಸಿದರು

"ಎಸ್‌ಡಿಎಂ (ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ) ಅವರನ್ನು ತಕ್ಷಣವೇ ವಜಾ ಮಾಡಬೇಕು. ಅವರು ಎಸ್‌ಡಿಎಂ ಹುದ್ದೆಗೆ ಅರ್ಹರಲ್ಲ ... ಸರಕಾರವು ಅವರನ್ನು ಬೆಂಬಲಿಸುತ್ತಿದೆ" ಎಂದು ವಿವಾದಾತ್ಮಕ ವೀಡಿಯೊವನ್ನು ಉಲ್ಲೇಖಿಸಿ ಮಲಿಕ್ ಹೇಳಿದರು.

ಹರ್ಯಾಣದ ಅಧಿಕಾರಿಯ ವಿರುದ್ಧ ಸರಕಾರವು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಸರಕಾರವು ಯಾವುದೇ ಸಾಂತ್ವನ ನೀಡದ ಕಾರಣ ನಿರಾಶೆಗೊಂಡಿದ್ದೇನೆ. 600 ರೈತರು ಸಾವನ್ನಪ್ಪಿದ್ದಾರೆ (ಒಂದು ವರ್ಷದ ಹಿಂದೆ ಆರಂಭವಾದ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ) ... ಆದರೆ ಸರಕಾರದಿಂದ ಯಾರೂ ಸಮಾಧಾನದ ಮಾತನ್ನೂ ಆಡಲಿಲ್ಲ" ಎಂದು ಮಲಿಕ್  ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News