ಆಂಜಿಯೋಪ್ಲ್ಯಾಸ್ಟಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Update: 2021-08-29 10:02 GMT

ಜೈಪುರ (ರಾಜಸ್ಥಾನ): ಜೈಪುರದ ಸವಾಯ್ ಮಾನ್ ಸಿಂಗ್ (ಎಸ್ಎಂಎಸ್) ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ನಂತರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವಿವಾರ ಡಿಸ್ಚಾರ್ಜ್ ಆಗಿದ್ದಾರೆ.

"ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ನನ್ನ ಮೊಮ್ಮಗಳು ಕಾಶ್ವಿನಿಯು ನಿವಾಸಕ್ಕೆ ಹೊರಡುವ ಮುನ್ನ ತಿಲಕ ಹಚ್ಚಿದಳು" ಎಂದು ಗೆಹ್ಲೋಟ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಆಗಸ್ಟ್ 28 ರಂದು ಮುಖ್ಯಮಂತ್ರಿ ಗೆಹ್ಲೋಟ್ ಅವರು  ತಮ್ಮ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಕಂಡುಬಂದ ಬಗ್ಗೆ ದೂರು ನೀಡಿದ ನಂತರ ಇಲ್ಲಿನ ಸರಕಾರಿ  ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಹಾಗೂ  ಸ್ಟೆಂಟಿಂಗ್ ಪ್ರಕ್ರಿಯೆಗೆ ಒಳಗಾದರು. ಆಸ್ಪತ್ರೆಯಿಂದ ಹೊರಡಿಸಲಾದ ಆರೋಗ್ಯ ಬುಲೆಟಿನ್ ಪ್ರಕಾರ, ಗೆಹ್ಲೋಟ್ ಮುಖ್ಯ ಅಪಧಮನಿಯೊಂದರಲ್ಲಿ ಶೇಕಡ 90 ರಷ್ಟು ಬ್ಲಾಕ್ ಇರುವುದು ಕಂಡುಬಂದಿದೆ.

70 ವರ್ಷದ ಕಾಂಗ್ರೆಸ್ ನಾಯಕನಿಗೆ ಈ ವರ್ಷ ಎಪ್ರಿಲ್‌ನಲ್ಲಿ ಕೊರೋನ ವೈರಸ್ ಪಾಸಿಟಿವ್ ಬಂದಾಗಿನಿಂದಲೂ ಆರೋಗ್ಯ ಸಮಸ್ಯೆ ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News