ಮಹಿಳೆ ನಾಪತ್ತೆ
Update: 2021-08-29 18:16 IST
ಉಡುಪಿ, ಆ.29: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ರಾಮಮಂದಿರ ರಸ್ತೆಯ ದೇವಾಡಿಗರ ಬೆಟ್ಟು ನಿವಾಸದ ಸುನೀತಾ (32) ಎಂಬವರು ಆ.14 ರಂದು ಮನೆಯಿಂದ ತೆರಳಿದ್ದು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಚಹರೆ: 5.2 ಅಡಿ ಎತ್ತರ, ಬಿಳಿ ಮೈ ಬಣ್ಣ, ಕಪ್ಪು ಬಣ್ಣದ ಬಿಳಿ ಚುಕ್ಕೆ ಇರುವ ಚೂಡಿದಾರ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಚುಕ್ಕೆುಳ್ಳ ಬಿಳಿ ಬಣ್ಣದ ವೇಲ್ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೋಲಿಸ್ ಠಾಣೆ: 0820-2564155 ಮೊ.ನಂ: 94808 05454 ಅಥವಾ ಪೋಲಿಸ್ ವೃತ್ತ ನಿರೀಕ್ಷಕರ ಕಚೇರಿ ಬ್ರಹ್ಮಾವರ: 0820-2561966,94808 05432ನ್ನು ಸಂಪರ್ಕಿಸುವಂತೆ ಕೋಟ ಪೋಲಿಸ್ ಉಪ ನಿರೀಕ್ಷಕರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.