ಬಜಾಲ್ ಎಸ್‌ಡಿಪಿಐ ಕಚೇರಿ ಉದ್ಘಾಟನೆ
Update: 2021-08-29 19:57 IST
ಮಂಗಳೂರು, ಆ.29: ಎಸ್‌ಡಿಪಿಐ ಬಜಾಲ್ ವಾರ್ಡ್ ಸಮಿತಿಯ ವತಿಯಿಂದ ಮಾಹಿತಿ ಮತ್ತು ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮವು ರವಿವಾರ ವಾರ್ಡ್ ಸಮಿತಿಯ ಅಧ್ಯಕ್ಷ ಕಬೀರ್ ಬಜಾಲ್‌ರ ಅಧ್ಯಕ್ಷತೆಯಲ್ಲಿ ಬಜಾಲ್ ಕಲ್ಲಕಟ್ಟೆಯಲ್ಲಿ ನಡೆಯಿತು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾಹಿತಿ ಮತ್ತು ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ರಿಯಾಝ್ ಫರಂಗಿಪೇಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ಥಳೀಯ ಮಸೀದಿಯ ಸದರ್ ಮುಅಲ್ಲಿಂ ಶರೀಫ್ ಸಅದಿ ದುಆಗೈದರು. ಅತಿಥಿಗಳಾಗಿ ಕ್ರಿಯೇಟಿವ್ ಫೌಂಡೇಶನ್‌ನ ನಿರ್ದೇಶಕ ಅಕ್ಬರ್ ಅಲಿ, ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಸುಹೇಲ್ ಖಾನ್, ಎಸ್‌ಡಿಟಿಯು ದ.ಕ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಸ್ಥಳೀಯ ಹಿರಿಯರಾದ ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.