ಸುರತ್ಕಲ್‌ನಲ್ಲಿ ಮಹಿಳಾ ಸುರಕ್ಷೆ ಕಾರ್ಯಗಾರ

Update: 2021-08-29 14:29 GMT

ಸುರತ್ಕಲ್, ಆ.29: ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯ, ಅನ್ಯಾಯಕ್ಕೆ ಸಂಬಂಧಿಸಿ ನ್ಯಾಯ ಕೋರಲು ಪೊಲೀಸ್ ಇಲಾಖೆಯ 112 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸುರತ್ಕಲ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಸ್ಸೈ ಪುನೀತ್ ಗಾಂವ್ಕರ್ ಹೇಳಿದರು.

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷೆಗಾಗಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ಮತ್ತು ಸುರತ್ಕಲ್ ಠಾಣೆಯ ಸಹಭಾಗಿತ್ವದಲ್ಲಿ ಸುರತ್ಕಲ್ ಬಂಟರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಮಾಹಿತಿ ಕಾರ್ಯಾ ಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಲವು ಸಂದರ್ಭ ಮಹಿಳೆಯರ ಮೇಲೆ ಅಹಿತಕರ ಘಟನೆಗಳು ನಡೆಯುತ್ತವೆ. ಆದರೆ ಅದು ಪೊಲೀಸರಿಗೆ ಒಂದೆರಡು ಗಂಟೆಯ ನಂತರ ತಿಳಿಯುತ್ತದೆ. ಇದರಿಂದ ಆರೋಪಿಗಳ ಪತ್ತೆ ತಡವಾಗುತ್ತದೆ. ಇನ್ಮುಂದೆ 112 ಸಂಖ್ಯೆಯನ್ನು ಬಳಸಿದರೆ ಆರೋಪಿಗಳ ಪತ್ತೆಯು ತ್ವರಿತಗತಿಯಲ್ಲಿ ನಡೆಯಲಿದೆ ಎಂದು ಪುನೀತ್ ಗಾಂವ್ಕರ್ ಹೇಳಿದರು.

ಸುರತ್ಕಲ್ ಪೊಲೀಸ್ ಠಾಣೆಯ ಎಚ್‌ಸಿಗಳಾದ ಮಮತಾ ಶೆಟ್ಟಿ, ಗೀತಾ ತಿಳಿಸಿದರು. ಸುರತ್ಕಲ್ ಬಂಟರ ಸಂಘ ಮಹಿಳಾ ವೇದಿಕೆ ಅಧ್ಯಕ್ಷೆ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಸುಜಾತಾ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶೆಟ್ಟಿ ಬಾಳಿಕೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News