×
Ad

ಆ.30: ರಾಷ್ಟ್ರೀಯ ಮಕ್ಕಳ ಉತ್ಸವ

Update: 2021-08-29 20:01 IST

ಮಂಗಳೂರು, ಆ.29: ಕಲ್ಕೂರ ಪ್ರತಿಷ್ಠಾನವು ಆನ್‌ಲೈನ್ ಮೂಲಕ ಆಯೋಜಿಸಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣ ವೇಷ ಸ್ಪರ್ಧೆಯು ಆ.30ರಂದು ನಗರದ ಕೋಡಿಯಾಲ್‌ ಬೈಲ್‌ನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ನಡೆಯಲಿದೆ.

ಬೆಳಗ್ಗೆ 9ಕ್ಕೆ ಉದ್ಘಾಟನೆಗೊಳ್ಳಲಿರುವ ಉತ್ಸವದಲ್ಲಿ 36 ವಿಭಾಗಗಳ ಸ್ಪರ್ಧೆ ನಡೆಯಲಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಅಮೇರಿಕ, ಆಸ್ಟ್ರೇಲಿಯಾ, ಬೆಹರೈನ್, ದುಬೈ, ಕೆನಡಾ, ಸಿಂಗಾಪುರವಲ್ಲದೆ  ಭಾರತದಾದ್ಯಂತ ಅಂದರೆ ರಾಜಸ್ಥಾನ, ಹೊಸದಿಲ್ಲಿ, ಚೆನ್ನೈ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮುಂಬೈಯ ಸಾವಿರಾರು ಮಂದಿ ಹೆಸರು ನೋಂದಾಯಿಸಿದ್ದಾರೆ. ಕಂಪ್ಯೂಟರ್ ತಾಂತ್ರಿಕ ತಂಡವೊಂದು ದಯಾನಂದ ಕಟೀಲ್ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. 150ಕ್ಕೂ ಅಧಿಕ ತೀರ್ಪುಗಾರರ ತಂಡವು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಲಿದೆ. ರಾತ್ರಿ 9:30ಕ್ಕೆ ಸಮಾರೋಪ ಸಮಾರಂಭ ಹಾಗೂ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News