ಉಳ್ಳಾಲ: ರಕ್ತದಾನ ಶಿಬಿರ, ಕೋವಿಡ್ ವಾರಿಯರ್ಸ್‌ಗಳಿಗೆ ಸನ್ಮಾನ ಕಾರ್ಯಕ್ರಮ
ಉಳ್ಳಾಲ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಉಳ್ಳಾಲ ಘಟಕದ ಉದ್ಘಾಟನೆ, ರಕ್ತದಾನ ಶಿಬಿರ ಹಾಗೂ ಕೋವಿಡ್ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮವು ಹಝ್ರತ್ ಸಯ್ಯದ್ ಮದನಿ ಶಾಲೆಯಲ್ಲಿ ನಡೆಯಿತು.
ಕಡಪರ ಖಿಲ್‌ರಿಯ ಜುಮಾ ಮಸೀದಿಯ ಖತೀಬ್ ಯೂಸುಫ್ ಸಖಾಫಿ ಬಪ್ಪಳಿಗೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಉಳ್ಳಾಲ ಇದರ ಅಧ್ಯಕ್ಷ ತನ್ವೀರ್ ವಹಿಸಿದ್ದರು. ಪಿಎಫ್ ಐ ರಾಜ್ಯ ಕಾರ್ಯ ದರ್ಶಿ ಅಶ್ರಫ್ ಎ.ಕೆ. ಪ್ರಾಸ್ತಾವಿಕ ಭಾಷಣ ಮಾಡಿದರು. ಕೆ.ಎಂ.ಸಿ.ರಕ್ತನಿಧಿ ಜ್ಯೋತಿ ಇದರ ವೈದ್ಯಾಧಿಕಾರಿ ಸಿಜಿ ತೋಮಸ್ ಶಿಬಿರದ ಮಹತ್ವವನ್ನು ವಿವರಿಸಿದರು.
ಈ ಸಂದರ್ಭ ಕೋವಿಡ್ ವಾರಿಯರ್ಸ್‌ಗಳಾದ ಡಾ. ಸುಜಯ ಪ್ರಭಾಕರ್, ಮರಿಯಮ್ಮ ಇಸ್ಮಾಯಿಲ್, ಅಬ್ದುಲ್ ಬಶೀರ್ ಕೈಕೊ ಹಾಗೂ ನವಾಝ್ ಅಳೇಕಲ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದರ್ಗಾ ಅಧ್ಯಕ್ಷ ಹಾಜಿ.ಅಬ್ದುಲ್ ರಶೀದ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಶಾಂತ್, ಅಬ್ದುಲ್ ಸಲಾಂ ಸಿ.ಎಚ್ , ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ, ಪಿಎಫ್ಐ ಉಳ್ಳಾಲ ಡಿವಿಷನ್ ಅಧ್ಯಕ್ಷ ಶಹೀದ್ ಕಲ್ಕಟ್ಟ, ಬದ್ರುದ್ದೀನ್ ಉಳ್ಳಾಲ, ಫಿರೋಝ್ ಇಸ್ಮಾಯಿಲ್, ರಮೀಝ್ ಕೋಟೆಪುರ, ಅಸ್ಗರ್ ಅಲಿ ಕೌನ್ಸಿಲರ್ ಉಳ್ಳಾಲ, ಬಶೀರ್ ಯು.ಎನ್, ಸುರೈ ಕುದ್ರೋಳಿ, ಕಲೀಲ್ ಕಡಪ್ಪರ, ನವಾಝ್ ಉಳ್ಳಾಲ, ನಿಝಾಂ ಮೇಲಂಗಡಿ, ಕೌನ್ಸಿಲರ್ ಅಬ್ದುಲ್ ಜಬ್ಬಾರ್, ಅಶ್ರಫ್ ಕೆ.ಸಿ.ರೋಡ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮುಹಮ್ಮದ್ ಫೈರೋಝ್ ನಿರೂಪಿಸಿದರು. ಸುಹೈಲ್ ಉಳ್ಳಾಲ ಸ್ವಾಗತಿಸಿ, ಹಮೀದ್ ಪಜೀರ್ ವಂದಿಸಿದರು.