×
Ad

ವಿಭಾ ಶ್ರೀನಿವಾಸ್ ನಾಯಕ್ ಹಾಡಿದ'ರಂಗಾ ನಿನ್ನ' ಆಲ್ಬಮ್ ಬಿಡುಗಡೆ

Update: 2021-08-29 20:18 IST

ಮಂಗಳೂರು : ಮಂಗಳೂರಿನ ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ವತಿಯಿಂದ ಸಂಗೀತ ವಿದುಷಿ ವಿಭಾ ಶ್ರೀನಿವಾಸ್ ನಾಯಕ್ ಅವರ ಸಂಗೀತ ಸುಧೆಯ 'ರಂಗಾ ನಿನ್ನ'... ಭಕ್ತಿ ಗೀತೆಗಳ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಆ.30ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ.

ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಆಲ್ಬಂ ಬಿಡುಗಡೆ ಮಾಡಲಿದ್ದಾರೆ. ಬೈಕಂಪಾಡಿಯ ಅನಘ ರಿಫೈನರೀಸ್ ಇದರ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಮಂಗಳೂರಿನ ಡಿಂಕಿ  ಡೈನ್ ಇದರ ಆಡಳಿತ ನಿರ್ದೇಶಕರಾದ ಸ್ವರ್ಣ ಸುಂದರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ನ ಪ್ರಕಟಣೆ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News