ಒಂಭತ್ತು ಥಾಯ್ ಪ್ರಜೆಗಳು ಸೇರಿದಂತೆ 12 ತಬ್ಲೀಗಿಗಳನ್ನು ಖುಲಾಸೆಗೊಳಿಸಿದ ಬರೇಲಿ ನ್ಯಾಯಾಲಯ

Update: 2021-08-29 16:15 GMT

ಬರೇಲಿ(ಉ.ಪ್ರ),ಆ.29: ತಬ್ಲೀಗಿ ಜಮಾಅತ್ ನ 12 ಸದಸ್ಯರನ್ನು ಸಾಕ್ಷಾಧಾರಗಳ ಕೊರತೆಯಿಂದ ಸ್ಥಳೀಯ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಒಂಭತ್ತು ಥಾಯ್ ಪ್ರಜೆಗಳು,ತಮಿಳುನಾಡಿನ ಇಬ್ಬರು ಮತ್ತು ಓರ್ವ ಸ್ಥಳೀಯ ಸೇರಿದಂತೆ ತಬ್ಲೀಗಿ ಜಮಾಅತ್ನ 12 ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಆರೋಪಿಗಳ ಪರ ವಕೀಲ ಎಂ.ಕೆ.ಗುಪ್ತಾ ತಿಳಿಸಿದರು. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರನ್ನು ಕಳೆದ ವರ್ಷ ಶಹಜಾನ್ಪುರದ ಮಸೀದಿಯೊಂದರಿಂದ ಬಂಧಿಸಲಾಗಿದ್ದು,ಪ್ರಕರಣದ ವಿಚಾರಣೆ ಬರೇಲಿ ನ್ಯಾಯಾಲಯದಲ್ಲಿ ನಡೆದಿತ್ತು.

ವಿಚಾರಣೆ ಸಂದರ್ಭದಲ್ಲಿ ತಾವು ಅಮಾಯಕರು ಎಂದು ತಬ್ಲಿಘಿ ಜಮಾಅತ್ ಸದಸ್ಯರು ನ್ಯಾಯಾಲಯಕ್ಕೆ ನಿವೇದಿಸಿದ್ದರು ಎಂದು ಗುಪ್ತಾ ಹೇಳಿದರು.

ಕಳೆದ ವರ್ಷದ ಮಾರ್ಚ್ ನಲ್ಲಿ ದಿಲ್ಲಿಯ ನಿಝಾಮುದ್ದೀನ್ ನ ಮರ್ಕಝ್ ನಲ್ಲಿ ನಡೆದಿದ್ದ ಸಮಾವೇಶದ ಬಳಿಕ ತಬ್ಲೀಗಿ ಜಮಾಅತ್ ಸದಸ್ಯರ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗಿದ್ದವು. ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ್ದ ಜನರು ಸಮಾವೇಶದಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News