×
Ad

ಮಂಗಳೂರು : ತಪೋವನ ಹೆಲ್ತ್ ಆ್ಯಂಡ್ ವೆಲ್‌ನೆಸ್ ಸೆಂಟರ್ ಉದ್ಘಾಟನೆ

Update: 2021-08-30 12:54 IST

ಮಂಗಳೂರು : ನಗರದ ವುಡ್ ಲ್ಯಾಂಡ್  ಹೊಟೇಲ್ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ ತಪೋವನ ಹೆಲ್ತ್ ಆ್ಯಂಡ್ ವೆಲ್‌ನೆಸ್ ಸೆಂಟರನ್ನು ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್. ಅಂಗಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆಯ ಬಗ್ಗೆ ಒಲವು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆಗೆ ತಪೋವನ ಹೆಲ್ತ್ ಆ್ಯಂಡ್ ವೆಲ್ ನೆಸ್ ಸೆಂಟರ್ ಆರೋಗ್ಯ ಸೇವೆ ನೀಡುವಂತಾಗಲಿ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಧಾಕೃಷ್ಣ ಬೂಡಿಯಾರ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದರು.

ತಪೋವನ ವೆಲ್ತ್ ಆ್ಯಂಡ್ ಹೆಲ್ತ್ ಸೆಂಟರ್ ನ ವೈದ್ಯರಾದ ಡಾ. ಹರ್ಷ ಹೆಬ್ಬಾರ್, ಡಾ. ದೇವಿಕೃಪಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News