ತಮಿಳುನಾಡು :2 ವರ್ಷದ ಮಗುವಿಗೆ ಚಿತ್ರಹಿಂಸೆ ನೀಡುತ್ತಿದ್ದ ತಾಯಿಯ ಬಂಧನ

Update: 2021-08-30 07:59 GMT

ಚೆನ್ನೈ: ತನ್ನ ಎರಡು ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿದ್ದ 23 ವರ್ಷದ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಹಲವಾರು ಆತಂಕಕಾರಿ ವೀಡಿಯೊಗಳು ಆನ್‌ಲೈನ್‌ನಲ್ಲಿ ಪ್ರಸಾರವಾದ ನಂತರ ಈ ಘಟನೆ ಬೆಳಕಿಗೆ ಬಂದಿತು. ಈ ವೀಡಿಯೊ ಮುಖಾಂತರ  ಪೊಲೀಸ್ ಕ್ರಮಕ್ಕೆ ಮುಂದಾಗಿ ಮಗುವಿನ ತಾಯಿಯನ್ನು ಬಂಧಿಸಿದ್ದಾರೆ.

ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿರುವ ಒಂದು ವೀಡಿಯೊದಲ್ಲಿ ತುಳಸಿ ಎಂದು ಗುರುತಿಸಲಾಗಿರುವ ಮಹಿಳೆ ಸ್ವತಃ; ತನ್ನ ಮಗ ಪ್ರದೀಪ್ ನ ಬಾಯಿಗೆ ಹೊಡೆಯುವುದನ್ನು ನೋಡಬಹುದು . ಬಾಯಿಯಲ್ಲಿ ರಕ್ತಸ್ರಾವವಾಗುವ ತನಕ ಮಹಿಳೆ ಮಗನಿಗೆ ಹೊಡೆದಿದ್ದಳು.

ಮತ್ತೊಂದು ವೀಡಿಯೊದಲ್ಲಿ ಮಗು ನೋವಿನಿಂದ ಕೂಗುತ್ತಿದ್ದಂತೆ ಮಗುವಿನ ಪಾದಕ್ಕೆ ಹೊಡೆಯುವುದನ್ನು ತೋರಿಸುತ್ತಿತ್ತು. ನಂತರ ಚಪ್ಪಲಿಯಿಂದ ಮಗುವಿಗೆ ಹೊಡೆಯುವುದನ್ನು ತೋರಿಸುತ್ತದೆ. ಕೆಲವೊಮ್ಮೆ ಮಹಿಳೆ ಅಳುತ್ತಿರುವುದನ್ನೂ ಕಾಣಬಹುದು.

ಇನ್ನೊಂದು ವೀಡಿಯೋ ಮಗುವಿನ ಹಿಂಭಾಗದಲ್ಲಿ ಭಯಾನಕ ಗಾಯದ ಗುರುತುಗಳನ್ನು ತೋರಿಸುತ್ತದೆ, ಇದು ಆಕೆ ಮಗುವನ್ನು  ಹೊಡೆದಿರಬಹುದು ಎಂದು ಸೂಚಿಸುತ್ತದೆ.

ತುಳಸಿ ಹಾಗೂ  ಮಗುವಿನ ತಂದೆ, ಇಬ್ಬರೂ ಕೃಷಿಕರಾಗಿದ್ದು ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು.

ವಿಚ್ಛೇದನದ ನಂತರ, ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತನ್ನ ತಾಯಿಯ ಮನೆಗೆ ತೆರಳಿದ್ದಳು. ಪ್ರದೀಪ್ ಮಹಿಳೆಯ ಕಿರಿಯ ಮಗನಾಗಿದ್ದ.

ತಮಿಳುನಾಡು ಪೊಲೀಸರ ವಿಶೇಷ ತಂಡ ಮಹಿಳೆಯನ್ನು ಬಂಧಿಸಲು ಚಿತ್ತೂರಿಗೆ ಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News