ಮಾಜಿ ಸಿಜೆಐ ರಂಜನ್ ಗೊಗೊಯಿ ರಾಜ್ಯಸಭೆ ನಾಮಕರಣ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟಿದ ವಕೀಲ

Update: 2021-08-30 13:17 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟ್‍ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ನಿವೃತ್ತರಾಗಿ ನಾಲ್ಕು ತಿಂಗಳ ನಂತರ, ಮಾರ್ಚ್ 2020ರಲ್ಲಿ ಅವರನ್ನು ರಾಜ್ಯಸಭೆಗೆ ನಾಮಕರಣಗೊಳಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ವಕೀಲ ಹಾಗೂ ಸಮಾಜ ಸೇವಕ ಸತೀಶ್ ಎಸ್ ಕಂಬಿಯೆ ಎಂಬವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.

ಗೊಗೊಯಿ ಅವರನ್ನು ಯಾವ ಅರ್ಹತೆಯ ಆಧಾರದಲ್ಲಿ ರಾಜ್ಯಸಭೆಗೆ ನಾಮಕರಣಗೊಳಿಸಲಾಗಿದೆ ಎಂದು ಅಪೀಲಿನಲ್ಲಿ ಪ್ರಶ್ನಿಸಲಾಗಿದೆಯಲ್ಲದೆ ಸೂಕ್ತ ತನಿಖೆ ನಡೆಸಿದ ನಂತರ ಅವರನ್ನು  ಆ ಹುದ್ದೆಯಿಂದ ತೆಗೆದುಹಾಕಬೇಕೆಂದು ಕೋರಿದೆ.

ರಾಜ್ಯಸಭಾ ವೆಬ್‍ಸೈಟ್‍ನಲ್ಲಿರುವ ಗೊಗೊಯಿ ಅವರ ವ್ಯಕ್ತಿಪರಿಚಯದಲ್ಲಿ ವಿವರಿಸಲಾಗಿರುವಂತೆ ಅವರ ಹೆಸರಿನಲ್ಲಿ ಯಾವುದೇ ಕೃತಿಗಳು, ಪ್ರಕಟಣೆಗಳಿಲ್ಲ ಹಾಗೂ ಅವರು ಯಾವುದೇ ಸಾಮಾಜಿಕ, ವೈಜ್ಞಾನಿಕ, ಸಾಹಿತ್ಯಕ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿಲ್ಲ ಎಂದು ತಿಳಿಯುತ್ತದೆಯಾದುದರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲು ನಿಯಮ ಪ್ರಕಾರ ಇರಬೇಕಾದ ಅರ್ಹತೆಗಳು ಅವರಿಗಿಲ್ಲ ಎಂದು ತಿಳಿಯುತ್ತದೆ ಎಂದು ಅಪೀಲಿನಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News