ಏಶ್ಯನ್ ಯೂತ್ ಬಾಕ್ಸಿಂಗ್: ಬಿಶ್ವಾಮಿತ್ರಗೆ ಚಿನ್ನ

Update: 2021-08-30 16:19 GMT

ಹೊಸದಿಲ್ಲಿ, ಆ.30: ದುಬೈನಲ್ಲಿ ಸೋಮವಾರ ನಡೆದ ಏಶ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಬಿಶ್ವಮಿತ್ರಾ ಚೋಂಗ್ ಥಮ್ ಚಿನ್ನದ ಪದಕವನ್ನು ಜಯಿಸಿದ್ದು, ಟೂರ್ನಿಯಲ್ಲಿ ಭಾರತೀಯ ಬಾಕ್ಸರ್ ಗಳು ತಮ್ಮ ಪ್ರಾಬಲ್ಯ ಮುಂದುವರಿಸಿದರು.

ಚೋಂಗ್ ಥಮ್ ಉಜ್ಬೇಕಿಸ್ತಾನದ ಕುಝಿಬೊವ್ ರನ್ನು 4-1 ಅಂತರದಿಂದ ಮಣಿಸಿದರು.

ಇದೇ ವೇಳೆ ವಿಶ್ವನಾಥ್ ಸುರೇಶ್(48ಕೆಜಿ) ಫೈನಲ್ ನಲ್ಲಿ ಹಾಲಿ ಯೂತ್ ವಿಶ್ವ ಚಾಂಪಿಯನ್ ಕಝಕ್ ಸ್ತಾನದ ಸಂಝಾರ್ ಟಶಕೆನ್ಬೆ ವಿರುದ್ಧ 0-5ರಿಂದ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು.

ಫೈನಲ್ ನಲ್ಲಿ ಸ್ಪರ್ಧಿಸಿರುವ 10 ಬಾಲಕಿಯರ ಪೈಕಿ 6 ಮಂದಿ ಚಿನ್ನದ ಪದಕಗಳನ್ನು ಜಯಿಸಿದರೆ, ಇತರ ನಾಲ್ವರು ಬೆಳ್ಳಿ ಪದಕ ಗೆದ್ದುಕೊಂಡರು. ಬಾಲಕರ ಪೈಕಿ ಮೂವರು ಫೈನಲ್ ಗೆ ತಲುಪಿದ್ದು, ಇಬ್ಬರು ಚಿನ್ನದ ಪದಕ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News