‘ವಕ್ಫ್ ಮಂಡಳಿಯಿಂದ ಗೌರವಧನ ಪಡೆಯುವವರು ಆಧಾರ್ ಜೋಡಿಸಿ’
Update: 2021-08-30 22:56 IST
ಮಂಗಳೂರು, ಆ.30: ರಾಜ್ಯ ವಕ್ಫ್ ಮಂಡಳಿಯಿಂದ ಮಾಸಿಕ ಗೌರವಧನ ಪಡೆಯುತ್ತಿರುವ ಪೇಶ್ ಇಮಾಮ್ ಮತ್ತು ಮೌಝನ್ (ಮುಕ್ರಿ) ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಮುಂದಿನ ಎರಡು ದಿನದೊಳಗೆ ಜೋಡಿಸಲು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಲಿಂಕ್ ಮಾಡಿಸಿದ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ, ಅಧಾರ್ ಕಾರ್ಡ್ ಝೆರಾಕ್ಸ್ ಪ್ರತಿಯನ್ನು ಜಿಲ್ಲಾ ವಕ್ಫ್ ಕಚೇರಿ, ಮಂಗಳೂರು ಇಲ್ಲಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಕಚೇರಿಗೆ ಬಂದು ಸಲ್ಲಿಸತಕ್ಕದ್ದು ಎಂದು ಜಿಲ್ಲಾ ವಕ್ಫ್ ಕಚೇರಿಯ ಪ್ರಕಟನೆ ತಿಳಿಸಿದೆ.