ಬ್ರೆಝಿಲ್: ಬ್ಯಾಂಕ್ ದರೋಡೆ ಯತ್ನ ವಿಫಲ; ಘರ್ಷಣೆಯಲ್ಲಿ 3 ಮಂದಿ ಮೃತ್ಯು, 6 ಮಂದಿಗೆ ಗಾಯ

Update: 2021-08-31 16:49 GMT

ರಿಯೊಡಿಜನೈರೊ, ಆ.31: ಬ್ರೆಝಿಲ್ ನಲ್ಲಿ ಕಾರಿನಲ್ಲಿ ಬಂದ ದರೋಡೆಕೋರರು 2 ಬ್ಯಾಂಕ್ ಗಳನ್ನು ಲೂಟಿ ಮಾಡಲು ಪ್ರಯತ್ನಿಸಿದ್ದು ಈ ಸಂದರ್ಭ ನಡೆದ ಘರ್ಷಣೆಯಲ್ಲಿ 3 ಮಂದಿ ಮೃತಪಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಪೋಟಕಗಳು, ಡ್ರೋನ್ ಹಾಗೂ ಮಾರಕ ಆಯುಧಗಳಿಂದ ಸಜ್ಜಾಗಿದ್ದ , ಬುಲೆಟ್ಪ್ರೂಫ್ ಜಾಕೆಟ್, ರೈಫಲ್ಸ್ ಹಾಗೂ ಹೆಲ್ಮೆಟ್ ಧರಿಸಿದ್ದ ದರೋಡೆಕೋರರು ಡೌನ್ಟೌನ್ ಸ್ಟ್ರೀಟ್ನಲ್ಲಿರುವ 2 ಬ್ಯಾಂಕ್ ಗಳಿಗೆ ನುಗ್ಗಿ ಅಲ್ಲಿದ್ದವರನ್ನು ಬೆದರಿಸಿದ್ದಾರೆ. ನಗರದ ವಿವಿಧೆಡೆ ಮತ್ತು ಪೊಲೀಸ್ ಠಾಣೆಯೆದುರು ಸ್ಫೋಟಕಗಳನ್ನು ಇರಿಸುವ ಮೂಲಕ ಭದ್ರತಾ ಸಿಬ್ಬಂದಿಯ ಚಲನವಲನ ವಿಳಂಬಿಸುವ ತಂತ್ರ ಹೂಡಿದ್ದಾರೆ. ದರೋಡೆಯ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಬಂದಾಗ ಅಲ್ಲಿದ್ದ ಕೆಲವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಕಾರಿನತ್ತ ತೆರಳಿ, ಕಾರಿನ ಮೇಲುಗಡೆ ಒತ್ತೆಯಾಳುಗಳನ್ನು ಕಟ್ಟಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ನಾಗರಿಕರು ಹಾಗೂ ಓರ್ವ ದರೋಡೆಕೋರ ಮೃತನಾಗಿದ್ದಾನೆ. ಇತರ ಇಬ್ಬರು ಕ್ರಿಮಿನಲ್ ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News