ತೂಮಿನಾಡು : ಅಲ್ ಫತಾಃ ಜುಮಾ ಮಸೀದಿಯ ನೂತನ ಕಟ್ಟಡ ಉದ್ಘಾಟನೆ

Update: 2021-09-01 07:39 GMT

ಮಂಜೇಶ್ವರ: ತೂಮಿನಾಡು ಅಲ್ ಫತಾಃ ಜುಮಾ ಮಸೀದಿಯ ಮೇಲಂತಸ್ತಿನ ನೂತನ ಕಟ್ಟಡ ಉದ್ಘಾಟನೆ ಬುಧವಾರ ಬೆಳಗ್ಗೆ ನಡೆಯಿತು.

ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅದ್ದು ಮೋನುಚ್ಚ ನೂತನ ಕಟ್ಟಡ ಲೋಕಾರ್ಪಪಣೆಗೊಳಿಸಿದರು. ಬಳಿಕ ಸಿರಾಜುಲ್ ಇಸ್ಲಾಂ  ಮದ್ರಸದ ಸದರ್ ಅಬ್ದುಲ್ ರವೂಫ್ ಫೈಝಿ ಪ್ರಾರ್ಥಣೆ ನೆರವೇರಿಸಿದರು. ಮಸೀದಿ ಖತೀಬ್ ಅಬ್ದುಲ್ ರಹ್ಮಾನ್ ಹರ್ಷದಿ ಮೌಲೂದ್ ಪಾರಾಯಣಕ್ಕೆ ನೇತೃತ್ವ ನೀಡಿದರು.

ಈ ಸಂದರ್ಭ ಕಮಿಟಿ ಪದಾಧಿಕಾರಿಗಳಾದ ಹನೀಫ್, ಟಿ ಎಂ ಮೆಹಮೂದ್, ಕುಂಞಮೋನು, ಹನೀಫ್ ಟಿ, ಇಜಾಸ್, ಅಬ್ದಲ್ ಖಾದರ್, ಅಬ್ದುಲ್ ಲತೀಫ್, ಸಿದ್ದೀಖ್ ತಂಘಲ್ , ತಸ್ರೀಫ್ , ಮಸೂದ್, ಸಿಯಾದ್, ಶೇಕುಂಞ, ಸಲೀಂ ಹಾಗೂ ಅಧ್ಯಾಪಕರುಗಳಾದ ಅಬೂಬಕ್ಕರ್ ಮುಸ್ಲಿಯಾರ್, ಇಬ್ರಾಹಿಂ ಖಲೀಲ್ ಹನೀಫಿ ಮೊದಲಾದವರು ಉಪಸ್ಥರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News