×
Ad

ಆರೆಸ್ಸೆಸ್‌ ಪ್ರಧಾನ ಕಚೇರಿಯಲ್ಲಿ ಮೋಹನ್‌ ಭಾಗವತ್‌ ರನ್ನು ಭೇಟಿಯಾದ ಮಾಜಿ ಸುಪ್ರೀಂಕೋರ್ಟ್‌ ಸಿಜೆಐ ಬೋಬ್ಡೆ

Update: 2021-09-01 13:56 IST

ಹೊಸದಿಲ್ಲಿ: ಭಾರತದ ಸುಪ್ರೀಂ ಕೋರ್ಟ್‌ ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್‌ ಎಸ್.ಎ ಬೋಬ್ಡೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ಸರಸಂಘಚಾಲಕ ಮೋಹನ್‌ ಭಾಗವತ್‌ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು indianexpress.com ವರದಿ ಮಾಡಿದೆ. 

ಈ ಸಭೆಯ ಬಗೆಗಿನ ಮಾಹಿತಿಯ ಕುರಿತು ಆರೆಸ್ಸೆಸ್‌ ಅಧಿಕಾರಿಗಳು ನಿರಾಕರಿಸಿದರೂ, ವಿಶ್ವಾಸಾರ್ಹ ಮೂಲಗಳು ಈ ಭೇಟಿ ನಡೆದಿರುವ ಕುರಿತು ದೃಢಪಡಿಸಿದೆ ಎಂದು ವರದಿ ತಿಳಿಸಿದೆ. ಮಹಲ್‌ ಪ್ರದೇಶದಲ್ಲಿರುವ ಆರೆಸ್ಸೆಸ್‌ ನ ಪ್ರಧಾನ ಕಚೇರಿಯಲ್ಲಿ ಸಂಜೆ ೪ರಿಂದ ೫ಗಂಟೆಯ ನಡುವೆ ಭೇಟಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಜಸ್ಟಿಸ್‌ ಬೋಬ್ಡೆ ಅವರು ಆರೆಸ್ಸೆಸ್‌ ಮುಖ್ಯಸ್ಥರನ್ನು ಸಂಘದ ಪ್ರಧಾನ ಕಚೇರಿಯಲ್ಲಿ ಔಪಚಾರಿಕವಾಗಿ ಭೇಟಿಯಾಗಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ. ಜೊತೆಗೆ ಆರೆಸ್ಸೆಸ್‌ ಸಂಸ್ಥಾಪಕ ಕೆ.ಬಿ ಹೆಡ್ಗೆವಾರ್‌ ರ ಪೂರ್ವಿಕರ ಮನೆಗೂ ಅವರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಜಸ್ಟಿಸ್‌ ಬೋಬ್ಡೆ ಮೂಲತಃ ನಾಗ್ಪುರದವರಾಗಿದ್ದು, ನಗರದಲ್ಲಿ ಹಲವು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿದ್ದರು. ಸದ್ಯ ಈ ಭೇಟಿಯು ವಿವಾದಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News