ಮಂಗಳೂರು: ಮನೆಗೆ ನುಗ್ಗಿ ಕಳವು; ದೂರು
Update: 2021-09-01 14:15 IST
ಮಂಗಳೂರು : ನಗರದ ಕಂಕನಾಡಿಯ ಮನೆಯೊಂದರಿಂದ ಡೈಮಂಡ್ ಬೆಂಡೋಲೆ, ಡೈಮಂಡ್ ಪೆಂಡೆಂಟ್ ಕಳವುಗೈದ ಘಟನೆ ನಡೆದಿದೆ.
ಆ.12ರಂದು ಬೆಳಗ್ಗೆ 9:30ರಿಂದ ಆ.21ರ ಮಧ್ಯಾಹ್ನದ ಅವಧಿಯಲ್ಲಿ ಮನೆಯ ಹಿಂಭಾಗದ ಬಾಗಿಲು ಮುರಿದು ಒಳಪ್ರವೇಶಿಸಿ ರೂಮ್‌ನ ಕಬೋರ್ಡ್‌ನಲ್ಲಿದ್ದ ವಜ್ರದ ಬೆಂಡೋಲೆ ಹಾಗೂ ಒಂದು ಜತೆ ಡೈಮಂಡ್ ಪೆಂಡೆಂಟ್ ಸೇರಿ ಅಂದಾಜು 50,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ, ಮನೆಯ ಅಲರಾಂ ಸಿಸ್ಟಂ ಮತ್ತು ಸಿಸಿ ಕ್ಯಾಮರಾಕ್ಕೆ ಹಾನಿ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.