×
Ad

ಸೆ.3-4: ಸಿಎ ವಿದ್ಯಾರ್ಥಿಗಳ ರಾಷ್ಟ್ರೀಯ ವರ್ಚುವಲ್ ಸಮ್ಮೇಳನ

Update: 2021-09-01 14:16 IST

ಮಂಗಳೂರು, ಸೆ.1: ಇನ್ಸಿಟ್ಯೂಟ್ ಆಫ್ ಚಾರ್ಟಡ್‌ರ ಅಕೌಂಟೆಂಟ್ ಆಫ್ ಇಂಡಿಯಾ (ಐಸಿಎಐ)ದ ಮಂಗಳೂರು ಶಾಖೆಯಾದ ಎಸ್‌ಐಆರ್‌ಸಿ ಮತ್ತು ದಕ್ಷಿಣ ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ಸೂಡೆಂಟ್ಸ್ ಯೂನಿಯನ್ (ಎಸ್‌ಐಸಿಎಎಸ್‌ಎ)ನ ಮಂಗಳೂರು ಶಾಖೆ ಸಹಭಾಗಿತ್ವದಲ್ಲಿ ಸೆ. 3 ಮತ್ತು 4ರಂದು ಸಿಎ ವಿದ್ಯಾರ್ಥಿಗಳ ರಾಷ್ಟ್ರೀಯ ವರ್ಚುವಲ್ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಟಿಯಲ್ಲಿಂದು ಈ ವಿಷಯ ತಿಳಿಸಿದ ಎಸ್‌ಐಆರ್‌ಸಿ- ಐಸಿಎಐನ ಮಂಗಳೂರು ಶಾಖೆಯ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಕಾಮತ್, ‘ಅನರ್ಘ್ಯ’ ಎಂಬ ಘೋಷ ವಾಕ್ಯದೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ನಾಲ್ಕು ತಾಂತ್ರಿಕ ವಿಚಾರ ಸಂಕಿರಣಗಳಲ್ಲಿ 8 ವಿದ್ಯಾರ್ಥಿಗಳು ವಿಚಾರ ಮಂಡಿಸಲಿದ್ದಾರೆ ಎಂದರು.

ಸೆ. 3ರಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ಮಾಲ್‌ಕೇಸ್‌ನ ಸಿಇಓ ಹಾಗೂ ಸ್ಥಾಪಕ ವಸಂತ್ ಕಾಮತ್, ಬೋರ್ಡ್ ಆಫ್ ಸ್ಟಡೀಸ್‌ನ ಅಧ್ಯಕ್ಷ ಜಾಯ್ ಚೈರಾ, ಎಸ್‌ಐಆರ್‌ಸಿ ಅಧ್ಯಕ್ಷ ಕೆ. ಜಲಪತಿ ಭಾಗವಹಿಸಲಿದ್ದಾರೆ. ಐಸಿಎಐನ ಕೇಂದ್ರೀಯ ಕೌನ್ಸಿಲ್ ಸದಸ್ಯ ಜಿ. ಶೇಖರ್, ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷ ಹಾಗೂ ಟ್ರಸ್ಟಿ ಚಂಚಲಾಪತಿ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಎಸ್‌ಐಆರ್‌ಸಿ- ಐಸಿಎಐನ ಕಾರ್ಯದರ್ಶಿ ಪ್ರಸನ್ನ ಶೆಣೈ ಎಂ., ಎಸ್‌ಐಸಿಎಸ್‌ಎ ಮಂಗಳೂರು ಶಾಖೆ ಅಧ್ಯಕ್ಷ ಗೌತಮ್ ಪೈ ಡಿ., ಉಪಾಧ್ಯಕ್ಷ ಶ್ರೇಯಸ್ ಶೆಟ್ಟಿ, ಕಾರ್ಯದರ್ಶಿ ಸುಶೀರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News