ಮಲ್ನಾಡ್ ಗಲ್ಫ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನೂತನ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ವಾಹಿದ್ ಅಹ್ಮದ್ ಮಾಗುಂಡಿ
ಬಾಳೆಹೊನ್ನೂರು : ಮಲ್ನಾಡ್ ಗಲ್ಫ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ಎಂಜಿಟಿ) ಇದರ ಜಿಲ್ಲಾ ಸಮಿತಿ ಪುನರ್ ರಚನೆ ಸಭೆಯು ಬಾಳೆಹೊನ್ನೂರಿನ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಬಾಳೆಹೊನ್ನೂರು ವಲಯದ ಕಾರ್ಯದರ್ಶಿ ಅಬ್ದುಲ್ ಹಕ್ ಕಿರಾಅತ್ ಪಠಣದೊಂದಿಗೆ ಸಭೆ ಆರಂಭಿಸಲಾಯಿತು. ಮಸೀದಿಕೆರೆ ಜುಮಾ ಮಸೀದಿಯ ಖತೀಬ್ ಕಾಸಿಂ ಕಾಮಿಲ್ ಸಖಾಫಿ ದುಆ ಮತ್ತು ಆಶೀರ್ವಚನ ನೀಡಿದರು.
ಬಾಳೆಹೊನ್ನೂರು ವಲಯ ಉಪಾಧ್ಯಕ್ಷರಾದ ಝಮೀರ್ ಮೂಸಬ್ಬ ಸ್ವಾಗತಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸಿರಾಜುದ್ದೀನ್ ಚಕ್ಕಮಕ್ಕಿ ಪ್ರಾಸ್ತಾವಿಕ ಭಾಷಣ ಮಾಡಿ, ವಂದಿಸಿದರು.
ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ವಾಹಿದ್ ಅಹ್ಮದ್ ಮಾಗುಂಡಿ, ಗೌರವಾಧ್ಯಕ್ಷರಾಗಿ ಯೂಸುಫ್ ಹಾಜಿ ಚಿಕ್ಕಮಗಳೂರು ಆಯ್ಕೆಯಾದರು.
ಕೇಂದ್ರ ಸಮಿತಿಯಿಂದ ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸಿರಾಜುದ್ದೀನ್ ಚಕ್ಕಮಕ್ಕಿ, ಅಂತರ್ ರಾಷ್ಟ್ರೀಯ ಸಂಚಾಲಕರಾದ ಅಬ್ದುಲ್ ಸತ್ತಾರ್ ಜಯಪುರ, ರಿಯಾದ್ ಘಟಕದ ಕಾರ್ಯದರ್ಶಿ ನಝೀರ್ ಮಾಡತ್ತಿಲ್ ಜಯಪುರ ಮತ್ತು ಚುನಾವಣಾಧಿ ಕಾರಿಯಾಗಿ ಸಮೀರ್ ಹಾಸನ ಪಾಲ್ಗೊಂಡಿದ್ದರು.
ನೂತನ ಜಿಲ್ಲಾ ಕಾರ್ಯಕಾರಿಣಿ ಸಮಿತಿ
ಅಧ್ಯಕ್ಷರು : ಅಬ್ದುಲ್ ವಾಹಿದ್ ಅಹ್ಮದ್ ಮಾಗುಂಡಿ
ಗೌರವಾಧ್ಯಕ್ಷರು : ಯೂಸುಫ್ ಹಾಜಿ ಚಿಕ್ಕಮಗಳೂರು
ಪ್ರಧಾನ ಕಾರ್ಯದರ್ಶಿ : ಅಬೂಬಕ್ಕರ್ ಸಿದ್ದೀಕ್ ಚಿಕ್ಕಮಗಳೂರು
ಖಜಾಂಚಿ : ಅಬೂಬಕ್ಕರ್ ಹಾಜಿ ಜಯಪುರ
ಉಪಾಧ್ಯಕ್ಷರುಗಳು : ಹಮೀದ್ ಸಬ್ಬೇನಹಳ್ಳಿ, ಅಸ್ಗರ್ ಅಲಿ ಗ್ಯಾಲಕ್ಸಿ
ಸಹಕ ಕಾರ್ಯದರ್ಶಿಗಳು : ಮೊಹಿಯುದ್ದೀನ್ ಸೇಠ್ ಮೂಡಿಗೆರೆ, ಇಬ್ರಾಹಿಂ ಕಳಸ
ಶಿಕ್ಷಣ ವಿಭಾಗದ ಸಂಚಾಲಕರು : ಆದಮ್ ಮೂಡಿಗೆರೆ, ಇಂದಾದುಲ್ಲ ಖಾನ್ ಬಾಳೆಹೊನ್ನೂರು.