×
Ad

ಸಿಪಿಎಂ ಹಿರಿಯ ಸದಸ್ಯ ಮೋನಪ್ಪ ಬಂಗೇರ ನಿಧನ

Update: 2021-09-01 18:00 IST

ಮಂಗಳೂರು, ಸೆ.1: ಸಿಪಿಎಂ ಪಕ್ಷದ ಹಿರಿಯ ಸದಸ್ಯ ಮೋನಪ್ಪ ಬಂಗೇರ  (78) ದೀರ್ಘಕಾಲದ ಅಸೌಖ್ಯದಿಂದಾಗಿ ಬಜಾಲ್ ಜಲ್ಲಿಗುಡ್ಡೆಯ ಸ್ವಗ್ರಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೂವರು ಪುತ್ರರನನ್ನು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೋನಪ್ಪ ಬಂಗೇರ ಅವರು ತಮ್ಮ ಅನೇಕ ಹೋರಾಟಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಾದ ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ ವ್ಯಾಯಾಮ ಶಾಲೆಗಳಲ್ಲೂ ಕ್ರಿಯಾಶೀಲ ಪಾತ್ರ ವಹಿಸಿದ ಮೋನಪ್ಪ, ಬಜಾಲ್ ಪ್ರದೇಶದ ದುಡಿಯುವ ವರ್ಗದ ಚಳವಳಿಯ ಬೆಳವಣಿಗೆಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ.

ಮೃದು ಸ್ವಭಾವದ, ಸರಳ ಸಜ್ಜನಿಕೆಯ ಮೋನಪ್ಪ ಬಂಗೇರ, ಪಕ್ಷದ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ತನ್ನ ಕೊನೆಯ ಉಸಿರಿನರೆಗೂ ಪಕ್ಷದ ಸದಸ್ಯರಾಗಿದ್ದು, ಅವರ ಅಗಲುವಿಕೆ ಬಜಾಲ್ ಗ್ರಾಮದ ಕಾರ್ಮಿಕ ವರ್ಗದ ಚಳವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಿಪಿಎಂ ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.

ಅಂತ್ಯಕ್ರಿಯೆಯಲ್ಲಿ ಸಿಪಿಎಂ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಮಂಗಳೂರು ನಗರ ಮುಖಂಡರಾದ ಸುರೇಶ್ ಬಜಾಲ್, ಅಶೋಕ್ ಸಾಲ್ಯಾನ್, ದೀಪಕ್ ಬಜಾಲ್, ವರಪ್ರಸಾದ್, ಜಯಪ್ರಕಾಶ್, ಮೋಹನ್ ಜಲ್ಲಿಗುಡ್ಡ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News