ತಾಲಿಬಾನ್ ಭಯೋತ್ಪಾದಕರೋ,ಅಲ್ಲವೋ: ಭಾರತ-ಅಫ್ಘಾನಿಸ್ತಾನ ಮಾತುಕತೆಯ ಬಳಿಕ ಒಮರ್ ಅಬ್ದುಲ್ಲಾ ಪ್ರಶ್ನೆ
Update: 2021-09-01 19:17 IST
ಹೊಸದಿಲ್ಲಿ: ಅಫ್ಘಾನಿಸ್ತಾನದ ಹೊಸ ಆಡಳಿತಗಾರ ತಾಲಿಬಾನ್ ಜೊತೆ ಮಾತುಕತೆ ಆರಂಭಿಸಿರುವ ಭಾರತವನ್ನು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇಂದು ತರಾಟೆಗೆ ತೆಗೆದುಕೊಂಡರು.
" ತಾಲಿಬಾನ್ ಭಯೋತ್ಪಾದಕ ಸಂಘಟನೆಯೋ ಅಥವಾ ಅಲ್ಲವೋ. ದಯವಿಟ್ಟು ನೀವು ಅವರನ್ನು ಹೇಗೆ ನೋಡುತ್ತೀರಿ ಎಂದು ನಮಗೆ ಸ್ಪಷ್ಟಪಡಿಸಿ" ಎಂದು ಅಬ್ದುಲ್ಲಾ ಹೇಳಿದ್ದಾರೆ ಎಂದು ANI ವರದಿ ಮಾಡಿದೆ.
"ತಾಲಿಬಾನ್ ಭಯೋತ್ಪಾದಕ ಗುಂಪಾಗಿದ್ದರೆ ನೀವು ಅವರೊಂದಿಗೆ ಏಕೆ ಮಾತನಾಡುತ್ತಿದ್ದೀರಿ? ತಾಲಿಬಾನ್ ಭಯೋತ್ಪಾದಕ ಸಂಘಟನೆ ಅಲ್ಲದಿದ್ದರೆ ನೀವು ವಿಶ್ವಸಂಸ್ಥೆಗೆ ಹೋಗಿ ಭಯೋತ್ಪಾದಕ ಸಂಘಟನೆಯ ಪಟ್ಟಿಯಿಂದ ಅದನ್ನು ತೆಗೆಯುತ್ತೀರಾ?ಎಂದು ಅಬ್ದುಲ್ಲಾ ಪ್ರಶ್ನಿಸಿದ್ದಾರೆ.