ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಗುವಿನ ವೈದ್ಯಕೀಯ ನೆರವಿಗೆ 3 ಲಕ್ಷ ರೂ. ಬಿಡುಗಡೆ
Update: 2021-09-01 19:33 IST
ಮಂಗಳೂರು: ಹುಟ್ಟಿನಿಂದ ಬರಬಹುದಾದ ಜೆನೆಟಿಕ್ ಅಸಮತೋಲನದ ಸಮಸ್ಯೆಗಳಲ್ಲಿ ಒಂದಾದ ವಿಲ್ಸನ್ ಡಿಸೀಸ್ ನಿಂದ ಬಳಲುತ್ತಿದ್ದ ಉಡುಪಿ ಜಿಲ್ಲೆಯ ದೀಕ್ಷಾ ಮತ್ತು ದಾಮೋದರ ಜೋಗಿಯವರ 6 ವರ್ಷ ಪ್ರಾಯದ ಮಗಳು ಮಾನ್ಯ ಜೋಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದು, ಮಗುವಿಗೆ ಲಿವರ್ ಟ್ರಾನ್ಸ್‌ಪ್ಲಾಂಟ್ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಚಿಕಿತ್ಸೆಗೆ 20 ಲಕ್ಷಕ್ಕೂ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ಮಗುವಿನ ವೈದ್ಯಕೀಯ ನೆರವಿಗೆ ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಶಿಫಾರಸ್ಸಿನ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಪರಿಹಾರ ನಿಧಿಯಿಂದ 3 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.