×
Ad

ಮೀನುಗಾರನನ್ನು ಕೋಟ್ಯಾಧಿಪತಿಯನ್ನಾಗಿಸಿದ "ಚಿನ್ನದ ಹೃದಯದ ಮೀನು"

Update: 2021-09-01 19:51 IST
Photo: India Today

ಮುಂಬೈ:  ಮುಂಬೈ ಸಮೀಪದ ಪಾಲ್ಘರ್ ಜಿಲ್ಲೆಯ ಮುರ್ಬೆ ಎಂಬ ಗ್ರಾಮದ ಮೀನುಗಾರ ಚಂದ್ರಕಾಂತ್ ತಾರೆ ಎಂಬವರು ತಮ್ಮ ವೃತ್ತಿಯಿಂದಾಗಿ ತಾವು ರಾತ್ರಿ ಬೆಳಗಾಗುವುದರೊಳಗಾಗಿ ಕೋಟ್ಯಾಧಿಪತಿಯಾಗಬಹುದೆಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.

ಮಳೆಗಾಲದ ಸಂದರ್ಭದ ಮೀನುಗಾರಿಕೆ ನಿಷೇಧ ಅವಧಿ ಮುಗಿದ ನಂತರ ಆಗಸ್ಟ್ 28ರಂದು ಮೀನುಗಾರಿಕೆಗೆ ತೆರಳಿದ ಸಂದರ್ಭ ಅವರ ಬಲೆಗೆ  ಒಂದೇ ಬಾರಿಗೆ 150 ಘೊಲ್ ಮೀನುಗಳು  ಬಿದ್ದಿದ್ದವು. ಘೊಲ್ ಮೀನು  ತಿನ್ನಲು ರುಚಿಕರವಾಗಿದೆಯಲ್ಲದೆ ಅದು ಔಷಧೀಯ ಗುಣಗಳಿಗೂ ಹೆಸರುವಾಸಿಯಾಗಿದೆಯಲ್ಲದೆ ವಿದೇಶಗಳಲ್ಲೂ ಅದಕ್ಕೆ  ಬೇಡಿಕೆಯಿದೆ. ಈ ಮೀನಿನ ಹಲವು ಭಾಗಗಳನ್ನು ಬಳಸಿ ಔಷಧಿಗಳನ್ನು ಹಾಗೂ ಇತರ ದುಬಾರಿ ಬೆಲೆಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಈ ಮೀನನ್ನು "ಚಿನ್ನದ ಹೃದಯ ಮೀನು" ಎಂದೂ ಹೇಳಲಾಗುತ್ತದೆ.

ಚಂದ್ರಕಾಂತ್ ಮತ್ತವರ ತಂಡ ಮೀನುಗಳನ್ನು ನಂತರ ಸುಮಾರು ರೂ 1.33 ಕೋಟಿಗೆ ಹರಾಜು ಹಾಕಿದೆ. ಆದರೆ ಬಿಡ್ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ತಿಳಿದು ಬಂದಿದೆ. ಈ ಮೀನಿನ ಹೊಟ್ಟೆಯಲ್ಲಿರುವ ಚೀಲದಂತಹ ವಸ್ತುವಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ ಎಂದು ಚಂದ್ರಕಾಂತ್ ತಾರೆ ಅವರ ಪುತ್ರ ಸೋಮನಾಥ್ ಹೇಳುತ್ತಾರೆ.

ಈ ಮೀನಿನ ವೈಜ್ಞಾನಿಕ ಹೆಸರು Protonibea diacanthus ಆಗಿದ್ದು ಇದು ಅತ್ಯಂತ ದುಬಾರಿ ಮೀನುಗಳಲ್ಲಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News