×
Ad

ಉಡುಪಿ: ಪೊಲೀಸ್ ಸಿಬ್ಬಂದಿಯ ಬೈಕ್ ಕಳವು

Update: 2021-09-01 22:01 IST

ಉಡುಪಿ, ಸೆ.1: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಬೈಕ್ ಕಳವಾಗಿರುವ ಘಟನೆ ಆ.30ರಂದು ರಾತ್ರಿ ವೇಳೆ ನಡೆದಿದೆ.

ಕೋಟ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಮಂಜುನಾಥ ಎಂಬವರು ತನ್ನ ಕೆಎ01 ಇಎಸ್4750 ನಂಬರಿನ ಬಜಾಜ್ ಡಿಸ್ಕವರ್ ಬೈಕ್‌ನ್ನು ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದು, ಬಳಿಕ ರಾತ್ರಿ ಬಂದು ನೋಡಿದಾಗ ಬೈಕ್ ಕಳವಾಗಿರುವುದು ಕಂಡುಬಂತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News