ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿ ಆರೋಪಿಗಳ ಬಂಧನ
Update: 2021-09-01 22:08 IST
ಉಡುಪಿ, ಸೆ.1: ನಗರದ ಡಯಾನಾ ಜಂಕ್ಷನ್ ಬಳಿಯ ಲಾಡ್ಜ್‌ನಲ್ಲಿ ಆ.31ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕಸ್ತೂರ್ಬಾ ನಗರದ ದಿನೇಶ, ಇಂದಿರಾ ನಗರದ ಪ್ರಸಾದ್, ಚಂದ್ರಶೇಖರ ಶೆಟ್ಟಿ, ಕುಕ್ಕಿಕಟ್ಟೆಯ ರಾಜೇಶ್ ದೇವಾಡಿಗ, ಕೊಡವೂರಿನ ಸುರೇಶ್ ದೇವಾಡಿಗ, ಕಲ್ಸಂಕದ ಚಂದ್ರಶೇಖರ ಬಂಧಿತ ಆರೋಪಿಗಳು.
ಬಂಧಿತರಿಂದ 9,290ರೂ. ನಗದು, 6 ಮೊಬೈಲ್ ಪೋನ್, 1 ಅಟೋ ರಿಕ್ಷಾ ಮತ್ತು 1 ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.