ಅಫ್ಘಾನ್ನಲ್ಲಿ ಅಮೆರಿಕದ ಉಪಸ್ಥಿತಿ ದುರಂತದಲ್ಲಿ ಅಂತ್ಯ: ರಶ್ಯ ಅಧ್ಯಕ್ಷ ಪುಟಿನ್

Update: 2021-09-01 17:03 GMT

ಮಾಸ್ಕೊ, ಸೆ.1: ಅಫ್ಘಾನ್ನಲ್ಲಿ ಅಮೆರಿಕದ 20 ವರ್ಷದ ಅಭಿಯಾನ ಕೇವಲ ದುರಂತ ಮತ್ತು ನಷ್ಟದಲ್ಲಿ ಕೊನೆಗೊಂಡಿದೆ ಎಂದು ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.

ಅಫ್ಘಾನ್ ಕುರಿತಂತೆ ಅಮೆರಿಕದ ಕಾರ್ಯನೀತಿಯ ಬಗ್ಗೆ ರಶ್ಯಾ ನಿರಂತರ ಟೀಕಿಸುತ್ತಾ ಬಂದಿತ್ತು. ಅದೀಗ ನಿಜವಾಗಿದ್ದು ಅಮೆರಿಕ ಪಡೆಗಳ ವಾಪಸಾತಿ ಪೂರ್ಣಗೊಳ್ಳುವ ಮೊದಲೇ ತಾಲಿಬಾನಿಗಳು ಅಫ್ಘಾನ್ನ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಎಂದು ಪುಟಿನ್ ಹೇಳಿದ್ದಾರೆ.

 ಯುದ್ಧದಿಂದ ಜರ್ಝರಿತವಾದ ಅಫ್ಘಾನ್ನಲ್ಲಿ ಅಮೆರಿಕ ಸೇನೆ 2 ದಶಕಗಳಷ್ಟು ಕಾಲ ತನ್ನ ಮಾನದಂಡವನ್ನು ಅಳವಡಿಸಲು ಪ್ರಯತ್ನಿಸಿದ್ದು ಇದೊಂದು ವ್ಯರ್ಥ ಪ್ರಯೋಗವಾಗಿದ್ದು ದುರಂತ ಮತ್ತು ನಷ್ಟ ಈ ಪ್ರಯೋಗದ ಫಲಿತಾಂಶವಾಗಿದೆ. ಹೊರಗಿನಿಂದ ಯಾವುದನ್ನೂ ಹೇರಲು ಸಾಧ್ಯವೇ ಇಲ್ಲ ಎಂದು ಪುಟಿನ್ ಹೇಳಿದರು. ವ್ಲಾದಿವೊಸ್ಟೊಕ್ ನಗರದಲ್ಲಿ ಶಾಲೆಗಳ ಪುನರಾರಂಭದ ಸಂದರ್ಭ ಶಾಲಾ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅಫ್ಘಾನ್ನ ವ್ಯವಹಾರದಲ್ಲಿ ರಶ್ಯ ಮಧ್ಯಪ್ರವೇಶಿಸುವ ಸಾಧ್ಯತೆಯೇ ಇಲ್ಲ. ಈ ಹಿಂದಿನ ಸೋವಿಯತ್ ಒಕ್ಕೂಟದ ಸಂದರ್ಭದಲ್ಲಿ ಈ ವಿಷಯದಲ್ಲಿ ರಶ್ಯಾ ಪಾಠ ಕಲಿತಿದೆ ಎಂದು ಕಳೆದ ವಾರ ಪುಟಿನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News